ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಪ್ರೋ ಕಬಡ್ಡಿ ಲೀಗ್ ಇಂದಿನಿಂದ ಪ್ರಾರಂಭವಾಗಲಿದೆ. ಈ ಬಾರಿಯ ಎಲ್ಲಾ 137 ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ. ಪ್ರತಿತಂಡವೂ 22 ಪಂದ್ಯಗಳನ್ನು ಆಡಲಿದ್ದು, ಅಗ್ರ ತಂಡಗಳು ಮಾತ್ರ ಫ್ಲೇ ಆಫ್ ಗೆ ಪ್ರವೇಶ ಪಡೆಯಲಿದೆ.
ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದೆ. ತಂಡವನ್ನು ಹೊಸದಾಗಿ ಕಟ್ಟಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವರ ಬೆಂಬಲ ಈ ತಂಡಕ್ಕಿದೆ. ಬೆಂಗಳೂರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ಬೆಂಗಳೂರು ಬುಲ್ಸ್ ಎದುರಾಳಿಗೆ ಗುಮ್ಮಲು ಸಜ್ಜಾಗಿದೆ.
ಮೊದಲ ದಿನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಯು ಮುಂಬಾ ಸೆಣೆಸಾಡಲಿದೆ. ಬೆಂಗಳೂರು ತಂಡ ನಾಯಕನಾಗಿ ಶೆರಾವತ್ ಹಾಗೂ ಉಪನಾಯಕನಾಗಿ ಮಹೇಂದ್ರ ಸಿಂಗ್ ಇದ್ದಾರೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಅಬೋಲ್ ಫಜಲ್ ,ಬಾಂಟಿ, ಚಂದ್ರನ್ ರಂಜಿತ್, ದೀಪಕ್ ನರ್ವಾಲ್, ಡಾಂಗ್ ಜಿಯೋನ್ ಲೀ, ಮೋರ್ ಜಿಬಿ, ನಸೀಬ್, ರೋಹಿತ್ ಸಾಂಗ್ವಾನ್, ಮಯೂರ್ ಕದಮ್, ಮೋಹಿತ್ ಸೆಹ್ರಾವತ್, ಮಹೇಂದರ್ ಸಿಂಗ್, ಸೌರಭ್ ನಂದಲ್, ಅಮಿತ್ ಶೆರಾನ್, ಅಂಕಿತ್, ವಿಕಾಸ್ ಮತ್ತೆ ಚಾಂಪಿಯನ್ ಆಗಲು ಸಜ್ಜಾಗಿದ್ದಾರೆ. ಯು ಮುಂಬಾ ಕೂಡ ಸ್ಟ್ರಾಂಗ್ ಆಗಿ ಕಣಕ್ಕಿಳಿಯುತ್ತಿದೆ. ಒಟ್ಟಿನಲ್ಲಿ 8ನೇಆವೃತ್ತಿಯ ಪ್ರೊ ಕಬ್ಬಡ್ಡಿ ಸಖತ್ ಇಂಟರೆಸ್ಟಿಂಗ್ ಆಗಿದೆ.