ಆಸೀಸ್ ಆಟಗಾರರ ಬ್ರೋಮ್ಯಾನ್ಸ್ ವಿಡಿಯೋ ವೈರಲ್ bromance sportskarnataka
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ನಲ್ಲಿ ನಡೆದ ಒಂದು ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ.
ಮೈದಾನದಲ್ಲಿ ಅಡಿಲೇಡ್ ತಂಡದ ಆಟಗಾರರಾದ ಡೇನಿಯಲ್ ವೊರಾಲ್, ಪೀಟರ್ ಸಿಡಿಲ್ ಬ್ರೋಮಾನ್ಸ್ ಮಾಡಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಡಿಸೆಂಬರ್ 21 ರಂದು ಸಿಡ್ನಿ ಸಿಕ್ಸರ್ಸ್ ವಿರುದ್ಧ ನಡೆದ ಮ್ಯಾಚ್ ನಲ್ಲಿ ಪೀಟರ್ ಸಿಡಿಲ್, ವೊರಾಲ್ ಅವರಿಗೆ ಮುತ್ತಿಟ್ಟಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಡಿಲೇಡ್, ನಿಗದಿತ 20 ಓವರ್ ಗಳಲ್ಲಿ 147 ರನ್ ಗಳನ್ನ ಗಳಿಸಿತ್ತು.
ಈ ಗುರಿಯನ್ನು ಕಾಪಾಡಿಕೊಳ್ಳಲು ಅಡಿಲೇಡ್ ಕ್ಯಾಪ್ಟನ್ ಪೀಟರ್ ಸಿಡಿಲ್, ಅನುಭವಿ ವೇಗಿ ಡೇನಿಯಲ್ ವೊರಾಲ್ ಅವರಿಗೆ ಮೊದಲ ಓವರ್ ಎಸೆಯಲು ಬಾಲ್ ಕೊಟ್ಟರು.
ಮೊದಲ ಎಸೆತದ ಬಳಿಕ ವೋರಾಲ್ ಹತ್ತಿರಕ್ಕೆ ಬಂದ ಸಿಡಿಲ್, ಸುದೀರ್ಘ ಚರ್ಚೆ ನಡೆಸಿದರು. ಹೀಗೆ ಮಾತನಾಡುತ್ತಾ ಸಿಡಿಲ್, ವೊರಾಲ್ ಅವರ ಕೆನ್ನೆಗೆ ಮುತ್ತಿಟ್ಟಿದ್ದು, ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.