ಪ್ರೊ ಕಬಡ್ಡಿ 8ನೇ ಆವೃತ್ತಿ ಭರ್ಜರಿ ಆರಂಭ ಕಂಡಿದೆ. ತವರಿನಲ್ಲಿ ಆಡುವ ಭಾಗ್ಯ ಸಿಕ್ಕರೂ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲು ಕಂಡಿದೆ. ಬೆಂಗಳೂರು ಗೂಳಿಯನ್ನು ಯು ಮುಂದಾ ತಂಡ ಯಶಸ್ವಿಯಾಗಿ ಕಟ್ಟಿಹಾಕಿತು.
ಉದ್ಘಾಟನಾ ಪಂದ್ಯದಲ್ಲಿ ಭರ್ಜರಿಯಾಗಿ ಆಡಿದ ಯು ಮುಂಬಾ 46- 30 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಕಟ್ಟಿಹಾಕಿತು. ಪಂದ್ಯದ ಆರಂಭದಿಂದಲೇ ಬುಲ್ಸ್ ತಂಡಕ್ಕೆ ಶಾಕ್ ನೀಡಿದ ಯು ಮುಂಬಾ 26 ರೈಡ್ ಪಾಯಿಂಟ್ ಗಳನ್ನು ಪಡೆದುಕೊಂಡಿತು. 13 ಟ್ಯಾಕಲ್ ಪಾಯಿಂಟ್ ಗಳು ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಬೆಂಗಳೂರು ಬುಲ್ಸ್ 27 ರೈಡ್ ಪಾಯಿಂಟ್ ಪಡೆದರೂ ಕೇವಲ 3 ಬಾರಿ ಮಾತ್ರ ಎದುರಾಳಿ ರೈಡರ್ ಗಳನ್ನು ಕಟ್ಟಿಹಾಕಿತ್ತು. ಹೀಗಾಗಿ ಬುಲ್ಸ್ ರಕ್ಷಣಾ ಕೋಟೆ ದುರ್ಬಲವಾಗಿ ಕಂಡಿತು.
ಯು ಮುಂಬಾ ಪರವಾಗಿ ಅಭಿಷೇಕ್ ಸಿಂಗ್ 15 ರೈಡ್ ಪಾಯಿಂಟ್ ಸೇರಿದಂತೆ 19 ಅಂಕಗಳನ್ನು ಪಡೆದುಕೊಂಡಿರು. ಹರೇಂದ್ರ ಕುಮಾರ್ ಮತ್ತು ಆಶೀಶ್ ಕುಮಾರ್ ಒಟ್ಟು ಸೇರಿಕೊಂಡು 7 ಟ್ಯಾಕಲ್ ಮಾಡಿ ಮಿಂಚಿದರು. ಬೆಂಗಳೂರು ಪರ ಚಂದ್ರನ್ ರಂಜಿತ್ 9 ರೈಡ್ ಪಾಯಿಂಟ್ ಸಹಿತ 13 ಅಂಕ ಪಡೆದರು. ಮಯೂರ್ ಕದಮ್ ಮತ್ತು ಜಿ.ಬಿ. ಮೋಡಿ ಸೇರಿಕೊಂಡು ಕೇವಲ 3 ಟ್ಯಾಕಲ್ ಪಾಯಿಂಟ್ ಪಡೆದರು. ಒಟ್ಟಿನಲ್ಲಿ ಯು ಮುಂಬಾ ಆರ್ಭಟದ ಮುಂದೆ ಬೆಂಗಳೂರು ಮಂಕಾಗಿತ್ತು.