team india – ವಿರಾಟ್ ಕೊಹ್ಲಿ ನಿರ್ಧಾರ ಕೇಳಿದಾಗ ಶಾಕ್ ಆಗಿತ್ತು – ರಿಕಿ ಪಾಂಟಿಂಗ್
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಂಡ ಸುದ್ದಿ ಕೇಳಿದಾಗ ನನಗೆ ಶಾಕ್ ಆಗಿತ್ತು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ವಿಶ್ವ ಕ್ರಿಕೆಟ್ ನ ಶ್ರೇಷ್ಟ ನಾಯಕರಲ್ಲಿ ರಿಕಿ ಪಾಂಟಿಂಗ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಕೂಡ ಆಗಿದ್ದಾರೆ.
ವಿರಾಟ್ ಕೊಹ್ಲಿ ಅದ್ಭುತ ನಾಯಕ. ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿದೇಶಿ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ನ ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಹೌದು, ವಿರಾಟ್ ನಾಯಕತ್ವವನ್ನು ತ್ಯಜಿಸಿದ್ದಾಗ ನನಗೆ ಅಚ್ಚರಿಯೂ ಆಯ್ತು. ಜೊತೆಗೆ ಶಾಕ್ ಕೂಡ ಆಗಿತ್ತು. ಇದಕ್ಕೆ ಕಾರಣವೂ ಇದೆ. ಕಳೆದ ಐಪಿಎಲ್ ನಲ್ಲಿ ನಾನು ವಿರಾಟ್ ಜೊತೆ ಚರ್ಚೆ ನಡೆಸಿದ್ದೆ. ವಿರಾಟ್ ಕೊಹ್ಲಿ ತನ್ನ ನಿರ್ಧಾರವನ್ನು ಯೋಚನೆ ಮಾಡಿಯೇ ಪ್ರಕಟಿಸಿದ್ದಾರೆ ಎಂಬ ಅಭಿಪ್ರಾಯವನ್ನು ರಿಕಿ ಪಾಂಟಿಂಗ್ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿಗೆ ಈಗ 33 ವರ್ಷ. ಅವರು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡಬಹುದು. ಈಗ ಅವರಿಗೆ ನಾಯಕತ್ವದ ಜವಾಬ್ದಾರಿ ಇಲ್ಲ. ಒತ್ತಡವೂ ಇಲ್ಲ. ಒಬ್ಬ ಆಟಗಾರನಾಗಿ ನೈಜ ಆಟವನ್ನು ಆಡಬಹುದು. ಮುಂದಿನ ದಿನಗಳಲ್ಲಿ ಹಲವು ದಾಖಲೆಗಳು ವಿರಾಟ್ ಹೆಸರಿಗೆ ಸೇರ್ಪಡೆಯಾಗಲಿದೆ ಎಂಬ ವಿಶ್ವಾಸವನ್ನು ರಿಕಿ ಪಾಂಟಿಂಗ್ ವ್ಯಕ್ತಪಡಿಸಿದ್ದಾರೆ.