ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಉದ್ಘಾಟನಾ ಪಂದ್ಯದಲ್ಲಿ ನಮಿಬಿಯಾ ಶ್ರೀಲಂಕಾ ತಂಡಕ್ಕೆ ಶಾಕ್ ಕೊಟ್ಟಿತ್ತು.
ಇದೀಗ ಕೆರೆಬಿಯನ್ನರಿಗೆ ಸ್ಕಾಟ್ಲೆಂಡ್ ಸೋಲಿನ ಆಘಾತ ನೀಡಿದೆ.
ಹೋಬರ್ಟ್ ಮೈದಾನದಲ್ಲಿ ನಡೆದ ಮೂರನೆ ಟಿ20 ಪಂದ್ಯದಲ್ಲಿ ಕ್ರಿಕೆಟ್ ಶಿಶು ಸ್ಕಾಟೆಲೆಂಡ್ ಎರಡು ಬಾರಿ ಟಿ20 ಚಾಂಪಿಯನ್ ವೆಸ್ಟ್ಇಂಡೀಸ್ ತಂಡವನ್ನು ಬಗ್ಗು ಬಡಿದಿದೆ. ಸ್ಕಾಟ್ಲೆಂಡ್ ಗೆಲುವಿನ ರೂವಾರಿ ಜಾರ್ಜ್ ಮುನ್ಸೆ.
ಹೋಬರ್ಟ್ ಮೈದಾನದಲ್ಲಿ ಓಪನರ್ರಾಗಿ ಕಣಕ್ಕಿಳಿದ ಮುನ್ಸೆ ವಿಂಡೀಸ್ ದಾಳಿಯನ್ನ ಧ್ವಂಸ ಮಾಡಿದರು. ತಂಡದ ಯಾವೊಬ್ಬ ಬ್ಯಾಟರ್ ಕೂಡ ಒಳ್ಳೆಯ ಮೊತ್ತ ಪೇರಿಸಲಿಲ್ಲ. ಮೆಕ್ ಲಿಯೊಡ್ 23, ಮೈಕಲ್ ಜಾನ್ಸ್ 20 ರನ್ ಕಲೆ ಹಾಕಿದರು.

ಆದರೆ ಮುನ್ಸೆ 53 ಎಸೆತ ಎದುರಿಸಿ 9 ಬೌಂಡರಿ ಸಿಡಿಸಿ ಅಜೇಯ 66 ರನ್ ಗಳಿಸಿದರು. ಮುನ್ಸೆ 43 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. ಒಟ್ಟು 9 ಬೌಂಡರಿ ಸಿಡಿಸಿದ ಮುನ್ಸೆ 124.52 ಸ್ಟ್ರೈಕ್ ರೇಟ್ ಪಡೆದರು.
ಮುನ್ಸ ಅರ್ಧ ಶತಕದ ನೆರೆವಿನಿಂದ ಸ್ಕಾಟ್ಲೆಂಡ್ 160ರನ್ ಗಳ ಸವಾಲಿನ ಮೊತ್ತ ನೀಡಲು ಸಾಧ್ಯವಾಯಿತು. ಜಾರ್ಜ್ ಮುನ್ಸೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.