ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್(England) ತಂಡ T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ(Pakistan)ದ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಬ್ರಿಸ್ಬೆನ್(Brisbane)ನಲ್ಲಿ ನಡೆದ ಪಂದ್ಯವನ್ನ ಮಳೆಯ ಕಾರಣದಿಂದ 19 ಓವರ್‌ಗೆ ಸೀಮಿತಗೊಳಿಸಲಾಯಿತು. ಹೀಗಾಗಿ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್(Bowling) ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿತು. ಆಂಗ್ಲರ ಬೌಲಿಂಗ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಅನುಭವಿಸಿದ ಪಾಕಿಸ್ತಾನ 19 ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್‌ಗಳಿಸಿತು. ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ 14.4 ಓವರ್‌ಗಳಲ್ಲಿ 162 ರನ್‌ಗಳಿಗೆ ಗೆಲುವಿನ ನಗೆಬೀರಿತು.

ಪಾಕ್ ಬ್ಯಾಟಿಂಗ್ ವೈಫಲ್ಯ:
ಪಾಕ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿರುವ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಬ್ಯಾಟಿಂಗ್‌ಗೆ ಬರಲಿಲ್ಲ. ಹೀಗಾಗಿ ಮಧ್ಯಮ ಇತರೆ ಬ್ಯಾಟ್ಸ್‌ಮನ್‌ಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಶಾನ್ ಮಸೂದ್(39_ ಮತ್ತು ಹೈದರ್ ಅಲಿ(18) ಮೊದಲು ವಿಕೆಟ್‌ಗೆ 49 ರನ್‌ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ನಂತರದಲ್ಲಿ ಇಫ್ತಿಕಾರ್ ಅಹ್ಮದ್(22) ಹಾಗೂ ಮೊಹಮ್ಮದ್ ವಾಸಿಂ(26) ರನ್‌ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿರ ಪ್ರದರ್ಶನ ಬರಲಿಲ್ಲ. ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳಿಸಿತು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 2 ವಿಕೆಟ್ ಪಡೆದರೆ, ಸ್ಟೋಕ್ಸ್, ಕರ್ರನ್, ಜೋರ್ಡನ್ ಹಾಗೂ ಲಿವಿಂಗ್‌ಸ್ಟೋನ್ ತಲಾ 1 ವಿಕೆಟ್ ಪಡೆದರು.
ಮಧ್ಯಮ ಕ್ರಮಾಂಕದ ಆಸರೆ:
ಪಾಕಿಸ್ತಾನ ನೀಡಿದ 161 ರನ್ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಫಿಲ್ ಸಾಲ್ಟ್(1) ಹಾಗೂ ಅಲೆಕ್ಸ್ ಹೇಲ್ಸ್(9) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ನಂತರದಲ್ಲಿ ಬಂದ ಬೆನ್ ಸ್ಟೋಕ್ಸ್(36), ಲಿವಿಂಗ್‌ಸ್ಟೋನ್(28), ಹ್ಯಾರಿ ಬ್ರೂಕ್(45) ಹಾಗೂ ಸ್ಯಾಮ್ ಕರ್ರನ್(33) ಜವಾಬ್ದಾರಿಯ ಬ್ಯಾಟಿಂಗ್ ಮೂಲಕ 14.4 ಓವರ್‌ಗಳಲ್ಲಿ 4 ವಿಕೆಟ್‌ಗೆ 163 ರನ್‌ಗಳಿಸಿ ಗೆಲುವಿನ ದಡಸೇರಿತು. ಪಾಕಿಸ್ತಾನದ ಪರ ಮೊಹಮ್ಮದ್ ವಾಸಿಂ ಜೂನಿಯರ್ ಎರಡು ವಿಕೆಟ್ ಪಡೆದರು. ಇತ್ತೀಚೆಗೆ ಗಾಯದ ಸಮಸ್ಯೆ ಬಳಿಕ ತಂಡಕ್ಕೆ ಮರಳಿದ ಶಾಹೀನ್ ಶಾ ಆಫ್ರಿದಿ, ಕೇವಲ ಎರಡು ಓವರ್ ಬೌಲ್ ಮಾಡಿ ಏಳು ರನ್ ನೀಡಿದರು.