ಕಾಂಗರೂ ನಾಡಲ್ಲಿ ನೆಡೆದ ಟಿ20 ವಿಶ್ವಕಪ್ಗೆ ಅದ್ದೂರಿ ತೆರೆ ಬಿದ್ದಿದೆ. ಐತಿಹಾಸಿಕ ಮೆಲ್ಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ಎರಡನೆ ಬಾರಿಗೆ ಚಾಂಪಯನ್ ಪಟ್ಟ ಅಲಂಕರಿಸಿತು.
ಜೊತೆಗೆ ಒಂದೇ ಅವಧಿಯಲ್ಲಿ ಏಕದಿನ ಹಾಗೂ ಟಿ20 ವಿಶ್ವಕಪ್ ಎತ್ತಿ ಹಿಡಿದು ವಿಶ್ವ ಕ್ರಿಕೆಟ್ನಲ್ಲಿ ಇತಿಹಾಸ ಬರೆಯಿತು.
ಟೂರ್ನಿಯಲ್ಲಿ 13 ವಿಕೆಟ್ ಪಡೆದ ಸ್ಯಾಮ್ ಕರನ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಸಾಧನೆ ಮಾಡಿದ ಮೊದಲ ಸ್ಪೆಷಲಿಸ್ಟ್ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ 296 ರನ್ ಹೊಡೆದು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದರು.
ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ 15 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.
ಟೂರ್ನಿಯಲ್ಲಿ 50ಕ್ಕಿಂತ ಅತಿ ಹೆಚ್ಚು ರನ್ ಹೊಡೆದ ಆಟಗಾರ ವಿರಾಟ್ ಕೊಹ್ಲಿ. ರನ್ ಮಷೀನ್ 4 ಅರ್ಧ ಶತಕ ಸಿಡಿಸಿದ್ದಾರೆ.
ಟೂರ್ನಿಯಲ್ಲಿ ಶತಕ ಸಿಡಿಸಿದ್ದು ಇಬ್ಬು ಬ್ಯಾಟರ್ಗಳು ನ್ಯೂಜಿಲೆಂಡ್ನ ಗ್ಲೇನ್ ಫಿಲೀಪ್ಸ್ ಹಾಗೂ ದಕ್ಷಿಣ ಆಫ್ರಿಕಾದ ರೀಲಿ ರೊಸೊ. ಇಬ್ಬರು ತಲಾ 1 ಶತಕ ಸಿಡಿಸಿದ್ದಾರೆ.
ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಜಿಂಬಾಬ್ವೆಯ ಆಲ್ರೌಂಡರ್ ಸಿಖಂದರ್ ರಾಝಾ. ಒಟ್ಟು 11 ಸಿಕ್ಸರ್ ಸಿಡಿಸಿದ್ದಾರೆ.
ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ್ದು ಭಾರತದ ಸೂರ್ಯಕುಮಾರ್ ಒಟ್ಟು 24 ಬೌಂಡರಿ ಸಿಡಿಸಿದ್ದಾರೆ.
ಟೂರ್ನಿಯಲ್ಲಿ ಅತಿ ಹೆಚ್ಚು ಮೇಡನ್ ಮಾಡಿದ ಬೌಲರ್ ಭುವನೇಶ್ವರ್ ಕುಮಾರ್. 3 ಮೇಡನ್ ಓವರ್ ಮಾಡಿದ್ದಾರೆ.
ಗೆದ್ದ ತಂಡಕ್ಕೆ 13,05 ಕೋಟಿ ರೂ. ರನ್ನರ್ ಅಪ್ಗೆ 6.5 ಕೋಟಿ ರೂ. ಸೆಮಿಫೈನಲ್ನಲ್ಲಿ ಸೋತ ಭಾರತಕ್ಕೆ 3.6 ಕೋಟಿ ಬಹುಮಾನ ಸಿಗಲಿದೆ.