ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಭಾರೀ ಅನುಭವಿಸಿದೆ.
ಪಾಕಿಸ್ತಾನ ಸೋಲಿಗೆ ಬ್ಯಾಟಿಂಗ್ ಕಾರಣ. ಇಂಗ್ಲೆಂಡ್ ಬೌಲರ್ಗಳ ಕರಾರುವಕ್ ದಾಳಿಗೆ ತತ್ತರಿಸಿದ ಪಾಕ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು.ಶಾನ್ ಮಸೂದ್ 38 ರನ್ , ನಾಯಕ ಬಾಬರ್ ಅಜಂ 32 ರನ್ ಹೊಡೆದು ತಂಡದ ಪರ ಗರಿಷ್ಠ ಮೊತ್ತ ಪೇರಿಸಿದರು.
ಬಾಬರ್ ಅಜಂ ಟಿ20 ಕ್ರಿಕೆಟ್ನಲ್ಲಿ ಅದ್ಭುತ ಬ್ಯಾಟರ್ ಅನ್ನೊದ್ರಲ್ಲಿ ಎರಡೂ ಮಾತಿಲ್ಲ. ಆದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಟೂರ್ನಿಯಲ್ಲಿ ಕೆಟ್ಟ ಸ್ಟ್ರೇಕ್ ರೇಟ್ ಹೊಂದಿದ್ದರು ಅನ್ನೋದನ್ನು ಅಂಕಿ ಅಂಶಗಳೆ ಹೇಳುತ್ತವೆ.
ಬಾಬರ್ ಅಜಂ ಈ ಟೂರ್ನಿಯಲ್ಲಿ 93.2 ಸ್ಟ್ರೆಕ್ ರೇಟ್ ಹೊಂದಿದ್ದರು.
ಬಾಬರ್ ಅಜಂ ಮಾತ್ರವಲ್ಲಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಎರ್ವಿನ್ 2022ರಲ್ಲಿ 89.6 ಸ್ಟ್ರೇಕ್ ರೇಟ್, ಬಾಂಗ್ಲಾದೇಶ ತಂಡದ ಲಿಟನ್ ದಾಸ್ 2021ರಲ್ಲಿ 94.3 ಸ್ಟ್ರೇಕ್ ರೇಟ್, ಅಫ್ಘಾನಿಸ್ತಾನದ ನೂರ್ ಅಲಿ ಜರ್ದಾನ್ 2016ರಲ್ಲಿ 96.1 ಸ್ಟ್ರೇಕ್ ರೇಟ್ ಹಾಗೂ ಐರ್ಲೆಂಡ್ನ ವಿಲಿಯಮ್ ಪೋರ್ಟರ್ಫೀಲ್ಡ್ 2009ರಲ್ಲಿ 97.1 ಸ್ಟ್ರೇಕ್ ರೇಟ್ ಹೊಂದಿದ್ದರು.