ರಾಜಸ್ಥಾನ ರಾಯಲ್ಸ್ ನಾಕೌಟ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.ಪಂಜಾಬ್ ಸತತ 9ನೇ ಬಾರಿಗೆ ಗುಂಪು ಹಂತದಲ್ಲಿ ಹೊರಬಿದ್ದಿದೆ.
ಆದರೆ ರಾಯಲ್ಸ್ ತಂಡದ ಭವಿಷ್ಯ ಆರ್ಸಿಬಿ ಹಾಗೂ ಮುಂಬೈ ಕೈಯಲ್ಲಿದೆ. ಈ ಎರಡೂ ತಂಡಗಳು ತನ್ನ ಕೊನೆಯ ಪಂದ್ಯದಲ್ಲಿ ಸೋತರೇ ಮಾತ್ರ ರಾಯಲ್ಸ್ ಗೆ ಪ್ಲೇ ಆಫ್ ಸಿಗಬಹುದು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು. ರಾಜಸ್ಥಾನ ರಾಯಲ್ಸ್ 19.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು.
ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 50,ಜೋಸ್ ಬಟ್ಲರ್ 0, ದೇವದತ್ ಪಡಿಕಲ್ 51, ಸಂಜು ಸ್ಯಾಮ್ಸನ್ 2, ಶಿಮ್ರಾನ್ ಹೇಟ್ಮಯರ್ 46,ರಿಯಾನ್ ಪರಾಗ್ 20,ಧ್ರುವ್ ಜುರೆಲ್ 10 ರನ್ ಗಳಿಸಿದರು.
ರಬಾಡ 40ಕ್ಕೆ 2, ಸ್ಯಾಮ್ ಕರ್ರನ್, ಅರ್ಷದೀಪ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ 2, ಶಿಖರ್ ಧವನ್ 17,ಸ್ಯಾಮ್ ಕರ್ರನ್ 49, ಜಿತೇಶ್ ಶರ್ಮಾ 44,ಶಾರುಖ್ ಖಾನ್ ಅಜೇಯ 41 ರನ್ ಹೊಡೆದರು.
ರಾಜಸ್ಥಾನ ಪರ ನವದೀಪ್ ಸೈನಿ 40ಕ್ಕೆ 3,ಟ್ರೆಂಟ್ ಬೌಲ್ಟ್ ಆ್ಯಡಾಮ್ ಜಂಪಾ ತಲಾ 1 ವಿಕೆಟ್ ಪಡೆದರು.