ಉತ್ತಮ ಪ್ರದರ್ಶನ ನೀಡಿ ಎರಡನೆ ಸ್ಥಾನ ಪಡೆದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಇನ್ನು ಪ್ಲೇಆಫ್ ಅರ್ಹತೆ ಪಡೆದಿಲ್ಲಿ. ಧೋನಿ ನೇತೃತ್ವದ ಚೆನ್ನೈ ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆïಗೆ ಅರ್ಹತೆ ಪಡೆಯಬೇಕಿದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಗೆಲ್ಲಲು ಹೋರಾಡಲಿದೆ.
ಚೆನ್ನೈ ತಂಡ 13 ಪಂದ್ಯಗಳಿಂದ 7ರಲ್ಲಿ ಗೆದ್ದು 5ರಲ್ಲಿ ಸೋತು 15 ಅಂಕ ಪಡೆದಿದೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ 6 ವಿಕೆಟ್ಗಳ ಸೋಲು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಇಂದಿನ ಪಂದ್ಯ ಗೆದ್ದರೆ ಲಖನೌ ಜತೆ ಸಮಗೊಳ್ಳಲಿದೆ.ಆದರೆ ನೆಟ್ ರನ್ ರೇಟ್ ಆಧಾರದ ಮೇಲೆ ಮೇಲೆರಲಿದೆ.
ಒಂದು ವೇಳೆ ಇಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಚೆನ್ನೈ ತಂಡ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಫಲಿತಾಂಶವನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಚೆನ್ನೈ ಗೆದ್ದು ಲಖನೌ ತಂಡ ಕೋಲ್ಕತ್ತಾ ವಿರುದ್ಧ ಸೋತರೆ ಧೋನಿ ಪಡೆ ನೇರವಾಗಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ.
ಇಂದಿನ ಪಂದ್ಯ ಸ್ಪಿನ್ನರ್ಗಳ ಕದವಾಗಿದೆ. ಡೆಲ್ಲಿ ತಂಡದ ಸ್ಪಿನ್ನರ್ಗಳು 7.09 ಎಕನಾಮಿ ರೇಟ್ನಲ್ಲಿ 24 ವಿಕೆಟ್ ಪಡೆದರೆ ಚೆನ್ನೈ ತಂಡ 7.55 ಎಕನಾಮಿ ರೇಟ್ನಲ್ಲಿ 35 ವಿಕೆಟ್ ಪಡೆದಿದ್ದಾರೆ. ಡೆಲ್ಲಿಗೆ ಅಕ್ಸರ್ ಪಟೇಲ್ ಕುಲ್ದೀಪ್ ಯಾದವ್ ಪ್ರಮುಖ ಸ್ಪಿನ್ನರ್ಗಳಾಗಿದ್ದಾರೆ. ರವೀಂದ್ರ ಜಡೇಜಾ ಮತ್ತು ಮೊಯಿನಲ್ ಅಲಿ ಟೂರ್ನಿಯ ಟಾಪ್ 5 ಸ್ಪಿನ್ನರ್ಗಳಾಗಿದ್ದಾರೆ.
ಚೆನ್ನೈ ಪರ ಡೆವೊನ್ ಕಾನ್ವೆ (498 ರನ್, 12 ಇನ್ನಿಂಗ್ಸ್), ಋತುರಾಜ್ ಗಾಯಕ್ವಾಡ್ (12 ಇನ್ನಿಂಗ್ಸ್ 425 ರನ್) ಉಳಿದಂತೆಶಿವಂ ದುಬೆ ಮತ್ತು ಅಜಿಂಕ್ಯ ರಹಾನೆ ಸೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ವೇಗಿಗಳಾದ ಮಥೀಶಾ ಪತಿರಾನಾ ಮತ್ತು ತುಷಾರ್ ದೇಶಪಾಂಡೆ 32 ವಿಕೆಟ್ ಪಡೆದಿದ್ದಾರೆ. ಪತಿರಾನ ಅತ್ಯುತ್ತಮ ಬೌಲರ್ರಾಗಿ ಹೊರಹೊಮ್ಮಿದ್ದಾರೆ.
ಈ ಬಾರಿ ಡೆಲ್ಲಿ ತವರಿನಲ್ಲಿ ಕಳಪೆ ಪ್ರದರ್ಶನ ನೀಡಿದೆ. 6 ಪಂದ್ಯಗಳಿಂದ 2 ಪಂದ್ಯಗಳನ್ನು ಗೆದ್ದಿದೆ. ಕಳೆದ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಡೆಲ್ಲಿ ಸುಧಾರಿಸಿಕೊಂಡಿದೆ.