ಈ ಬಾರಿಯ ಐಪಿಎಲ್ ಕಂಡು ಕೇಳರಿಯದಷ್ಟು ಸಿಕ್ಸರ್ಗಳು ಸಿಡಿದಿದ್ದವು. ಎಲ್ಲಾ ತಂಡಗಳು ತಾ ಮುಂದು, ನಾ ಮುಂದು ಅನ್ನುವಂತೆ ಸಿಕ್ಸರ್ಗಳನ್ನು ಸಿಡಿಸಿದ್ದವು. ರಾಜಸ್ಥಾನ ರಾಯಲ್ಸ್ ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದೆ. ರಾಯಲ್ಸ್ ಸಿಕ್ಸರ್ ಲೆಕ್ಕವೂ ಇತರೆ ತಂಡಗಳಿಗಿಂತ ಹೆಚ್ಚಿದೆ.
ಅಚ್ಚರಿ ಅಂದರೆ ಚಾಂಪಿಯನ್ ಗುಜರಾತ್ ತಂಡ ಅತ್ಯಂತ ಕಡಿಮೆ ಸಿಕ್ಸರ್ ಸಿಡಿಸಿದೆ. 10 ತಂಡಗಳ ಪೈಕಿ 8 ತಂಡಗಳು ಸಿಕ್ಸರ್ಗಳ ಶತಕ ಪೂರೈಸಿವೆ. ಆದರೆ ಸನ್ ರೈಸರ್ಸ್ಹೈದ್ರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಶತಕದ ಗಡಿ ದಾಟಿಲ್ಲ. ಗುಜರಾತ್ ಟೈಟಾನ್ಸ್ ಅಂತೂ 80 ಸಿಕ್ಸರ್ ಕೂಡ ಸಿಡಿಸಿಲ್ಲ ಅನ್ನುವುದು ಅಚ್ಚರಿ ಹುಟ್ಟಿಸಿದೆ.
ಸಿಕ್ಸರ್ ಲೆಕ್ಕ
- ರಾಜಸ್ಥಾನ್ ರಾಯಲ್ಸ್ – 17 ಪಂದ್ಯಗಳು – 137 ಸಿಕ್ಸರ್
- ಲಕ್ನೋ ಸೂಪರ್ ಜೈಂಟ್ಸ್ – 15 ಪಂದ್ಯಗಳು – 115 ಸಿಕ್ಸರ್
- ಕೋಲ್ಕತ್ತಾ ನೈಟ್ ರೈಡರ್ಸ್ – 14 ಪಂದ್ಯಗಳು – 113 ಸಿಕ್ಸರ್
- ಪಂಜಾಬ್ ಕಿಂಗ್ಸ್ – 14 ಪಂದ್ಯಗಳು – 110 ಸಿಕ್ಸರ್
- ಡೆಲ್ಲಿ ಕ್ಯಾಪಿಟಲ್ಸ್ – 14 ಪಂದ್ಯಗಳು – 106 ಸಿಕ್ಸರ್
- ಚೆನ್ನೈ ಸೂಪರ್ ಕಿಂಗ್ಸ್ – 14 ಪಂದ್ಯಗಳು – 103 ಸಿಕ್ಸರ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು – 16 ಪಂದ್ಯಗಳು – 102 ಸಿಕ್ಸರ್
- ಮುಂಬೈ ಇಂಡಿಯನ್ಸ್ – 14 ಪಂದ್ಯಗಳು – 100 ಸಿಕ್ಸರ್
- ಸನ್ ರೈಸರ್ಸ್ ಹೈದರಾಬಾದ್ – 14 ಪಂದ್ಯಗಳು – 97 ಸಿಕ್ಸರ್
- ಗುಜರಾತ್ ಟೈಟನ್ಸ್ – 16 ಪಂದ್ಯಗಳು – 79 ಸಿಕ್ಸರ್