ವಿಶ್ವದ ನಂ.1 ಆಟಗಾರ್ತಿ ಇಂಗಾ ಸ್ವೆಟೆಕ್ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಅವರು ಅಮೆರಿಕದ ಕೊಕೊ ಗೌಫ್ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿದರು. ಸತತ 35 ಪಂದ್ಯಗಳಲ್ಲಿ ಇಂಗಾ ಸೋಲು ಕಂಡಿಲ್ಲ. ಮೊದಲ ಸೆಟ್‌ನಿಂದಲೇ ಇಗಾ ಕೊಕೊ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದರು ಮತ್ತು ಆಕೆಗೆ ಹಿಂತಿರುಗಲು ಯಾವುದೇ ಅವಕಾಶವನ್ನು ನೀಡಲಿಲ್ಲ.
ಈ ಗೆಲುವಿನೊಂದಿಗೆ ಇಗಾ ವೀನಸ್ ವಿಲಿಯಮ್ಸ್ ದಾಖಲೆಯನ್ನು ಸರಿಗಟ್ಟಿದರು. 2000 ರಲ್ಲಿ ವೀನಸ್ ಸತತ 35 ಪಂದ್ಯಗಳನ್ನು ಗೆದ್ದಿದ್ದರು. ಇಗಾ 35 ಪಂದ್ಯಗಳನ್ನು ಗೆದ್ದು 22 ವರ್ಷಗಳ ನಂತರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಗಾ ಪಂದ್ಯದ ನಂತರ ಟ್ರೋಫಿಯನ್ನು ಪಡೆಯುವ ವೇಳೆ, ಪೋಲೆಂಡ್‌ನ ರಾಷ್ಟ್ರಗೀತೆಯನ್ನು ನುಡಿಸುವಾಗ ಅವರು ಭಾವುಕರಾದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Celebration on 🥳#RolandGarros | @iga_swiatek pic.twitter.com/conmijDNEv
— Roland-Garros (@rolandgarros) June 4, 2022
ಇಂಗಾ ಎರಡನೇ ಬಾರಿಗೆ ಫ್ರೆಂಚ್ ಓಪನ್‌ನ ಫೈನಲ್‌ನಲ್ಲಿ ಆಡಿದರು. ಇದಕ್ಕೂ ಮೊದಲು, 2020 ರ ಋತುವಿನಲ್ಲಿ, ಅವರು ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿ ತಮ್ಮ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ ಸ್ವೆಟೆಕ್ 20ನೇ ಶ್ರೇಯಾಂಕದ ಕಸಟ್ಕಿನಾ ಅವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿದರು. ಕೊಕೊ 6-3, 6-1 ನೇರ ಸೆಟ್‌ಗಳಲ್ಲಿ ಮಾರ್ಟಿನಾ ಟ್ರೆವಿಸನ್‌ರನ್ನು ಸೋಲಿಸಿ ಫೈನಲ್ ತಲುಪಿದರು. ಪಂದ್ಯ ಒಂದು ಗಂಟೆ 28 ನಿಮಿಷಗಳ ಕಾಲ ನಡೆಯಿತು.

ಕೊಕೊ ಕಳೆದ ವರ್ಷ ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಆದರೆ, ಈ ವರ್ಷ ಫೈನಲ್ ತಲುಪಿದ್ದ ಅವರು ಈ ಪಂದ್ಯವನ್ನು ಗೆದ್ದಿದ್ದರೆ ಫ್ರೆಂಚ್ ಓಪನ್ ಗೆದ್ದ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು. ಇದಕ್ಕೂ ಮುನ್ನ ಇಂಗಾ ಸ್ವೆಟೆಕ್ ಮತ್ತು ಕೊಕೊ ನಡುವೆ ಎರಡು ಪಂದ್ಯಗಳು ನಡೆದಿದ್ದವು. ಎರಡೂ ಬಾರಿ ಸ್ವೆಟೆಕ್ ಜಯಶಾಲಿಯಾದರು.