Pro Kabaddi: ತಲೈವಾಸ್ ಮಣಿಸಿದ ಮಾಜಿ ಚಾಂಪಿಯನ್ಸ್
ಬೆಂಗಳೂರಿನಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 16ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು-ಮುಂಬಾ 39-32 ರಿಂದ ತಮಿಳು ತಲೈವಾಸ್ ವಿರುದ್ಧ ಜಯ ಸಾಧಿಸಿತು.
ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ತಮಿಳು ತಲೈವಾಸ್ 16-15 ರಿಂದ ಮುಂಬಾ ತಂಡದ ವಿರುದ್ಧ ಮುನ್ನಡೆ ಸಾಧಿಸಿತು. ತಮಿಳು ಈ ವೇಳೆ ಹೆಚ್ಚಿನ ಅಂಕಗಳನ್ನು ದಾಳಿಯನ್ನು ಪಡೆಯಿತು. ಅಲ್ಲದೆ ಟ್ಯಾಕಲ್ ನಲ್ಲಿ ಮೂರು ಅಂಕ ಸೇರಿಸಿತು. ಇನ್ನು ಮುಂಬಾ ತಂಡ ರೈಡಿಂಗ್ ನಲ್ಲಿ 13 ಅಂಕ ಸೇರಿಸಿತು.
ಎರಡನೇ ಅವಧಿಯ ಆಟದಲ್ಲಿ ಮುಂಬಾ ಮಿಂಚಿನ ಪ್ರದರ್ಶನ ನೀಡಿತು. ಮುಂಬಾ ದಾಳಿಯಲ್ಲಿ ಅಬ್ಬರಿಸಿತು. ಈ ಅವಧಿಯಲ್ಲಿ ಎದುರಾಳಿ ತಂಡವನ್ನು ಎರಡು ಬಾರಿ ಔಟ್ ಮಾಡಿದರು. ಅಲ್ಲದೆ ನಾಲ್ಕು ಅಂಕ ಕಲೆ ಹಾಕಿತು. ಎರಡನೇ ಅವಧಿಯಲ್ಲಿ ಮುಂಬಾ ಸಂಘಟಿತ ಆಟದ ಪ್ರದರ್ಶನ ನೀಡಿತು.
ಮುಂಬಾ ಪರ ಗುಮಾನ್ 18 ಬಾರಿ ರೈಡ್ ಮಾಡಿ 12 ಅಂಕ ಕಲೆ ಹಾಕಿದರು. ಉಳಿದಂತೆ ಆಶೀಶ್ 10, ಜೈ ಭಗವಾನ್ 8 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು. ರಿಂಕು ಹಾಗೂ ಸುರೇಂದ್ರ ಟ್ಯಾಕಲ್ ನಲ್ಲಿ ಅಂಕ ಗಳಿಸಿ ಮಿಂಚಿದರು. ತಮಿಳು ಪರ ನರೇಂದ್ರ 15 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
Pro Kabaddi, U Mumba, Tamil Thalaivas