ಬೆಂಗಳೂರು-ಚೆನ್ನೈ ಪಂದ್ಯ ಡ್ರಾ
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ತಂಡ ಎರಡನೇ ಪಂದ್ಯದಲ್ಲಿ ಚೆನ್ನೈ ಎಫ್.ಸಿ ವಿರುದ್ಧ ಡ್ರಾ ಸಾಧಿಸುದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು 1-1 ರಿಂದ ಚೆನ್ನೈ ಡ್ರಾ ಸಾಧಿಸಿತು. ಅಲ್ಲದೆ ಎರಡೂ ಪಂದ್ಯಗಳಲ್ಲಿ ಒಂದು ಜಯ, ಒಂದು ಡ್ರಾ ಸಾಧಿಸಿರುವ ಎರಡೂ ತಂಡಗಳು ತಲಾ ನಾಲ್ಕು ಅಂಕ ಕಲೆ ಹಾಕಿವೆ. ಆದರೆ ಚೆನ್ನೈ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬೆಂಗಳೂರು ನಾಲ್ಕನೇ ನಿಮಿಷದಲ್ಲಿ ಗೋಲು ಬಾರಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ರಾಯ್ ಕೃಷ್ಣ ಎದುರಾಳಿ ಗೋಲ್ ಕೀಪರ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಅಲ್ಲದೆ ತಂಡದ ಮುನ್ನಡೆಗೆ ಕಾರಣರಾದರು.
ಇದೇ ಅವಧಿಯಲ್ಲಿ ಅಂಕದ ಅಂತರವನ್ನು ಹೆಚ್ಚಿಸಿಕೊಳ್ಳುವ ಬೆಂಗಳೂರು ತಂಡದ ಆಸೆ ಫಲಿಸಲಿಲ್ಲ. ಆದರೆ ಇದೇ ಅವಧಿಯ ಕೊನೆಯ ಹೆಚ್ಚುವರಿ ಸಮಯದಲ್ಲಿ ಚೆನ್ನೈ ಚೆಂಡಿನ ಮೇಲೆ ಹಿಡಿತ ಸಾಧಿಸಿ, ಬೆಂಗಳೂರು ತಂಡದ ಗೋಲಿಯನ್ನು ವಂಚಿಸುವಲ್ಲಿ ಸಫಲವಾಯಿತು. ಪರಿಣಾಮ ಮೊದಲಾವಧಿಯ ಆಟ ಸಮಬಲದಲ್ಲಿ ಸಾಗಿತು.
ಎರಡನೇ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟದ ಪ್ರದರ್ಶನ ನೀಡಿದ ಎರಡೂ ತಂಡಗಳು ಅಂಕ ಸೇರುಸುವಲ್ಲಿ ವಿಫಲವಾದವು. ಇದೇ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಿಎಫ್ ಸಿ ಎಡವಿತು.
ISL, Indian Super League, Bengaluru football