Pro Kabaddi: ತಲೈವಾಸ್ ಸವಾಲು ಗೆದ್ದ ಬುಲ್ಸ್
ಆಲ್ ರೌಂಡರ್ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡ ಮನೆಯಂಗಣದಲ್ಲಿ ತಮಿಳು ತಲೈವಾಸ್ ವಿರುದ್ಧ 45-28 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿ, ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಭರತ್ ಅವರ ಸೂಪರ್ ಟೆನ್ (12) ಹಾಗೂ ವಿಕಾಶ್ ಕಂಡೋಲ (7) ಅವರ ಅದ್ಭುತ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ತಮಿಳು ತಲೈವಾಸ್ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾಯಿತು. ನಾಯಕ ಮಹೇಂದರ್ ಸಿಂಗ್ ಮತ್ತು ಸೌರಭ್ ನಂದಾಲ್ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ತಮಿಳು ತಲೈವಾಸ್ ಪವನ್ ಶೆರಾವತ್ ಇಲ್ಲದೆ ಮತ್ತೊಂದು ಪಂದ್ಯವನ್ನು ಸೋತಿತು, ತಂಡದ ಪರ ನರೇಂದರ್ ರೈಡಿಂಗ್‌ನಲ್ಲಿ ಸೂಪರ್ ಟೆನ್ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡ ತಮಿಳು ತಲೈವಾಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 18-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ತಮಿಳು ತಲೈವಾಸ್ ಆರಂಭದಲ್ಲಿ ಬೃಹತ್ ಅಂತರದಲ್ಲಿ ಹಿನ್ನಡೆ ಕಂಡಿತ್ತು, ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡಿತು.

ಬೆಂಗಳೂರು ಬುಲ್ಸ್ ಆರಂಭದಲ್ಲಿ ತೋರಿದ ಉತ್ಸಹಾವನ್ನು ಕೊನೆಯ ಕ್ಷಣದವರೆಗೂ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಬೆಂಗಳೂರು ಬುಲ್ಸ್ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್ ಪಡೆಯನ್ನು ಆಲೌಟ್ ಮಾಡುವ ಮೂಲಕ ಮುನ್ನಡೆಗೆ ಮತ್ತೆರಡು ಅಂಕಗಳನ್ನು ಗಳಿಸಿತ್ತು.
Pro Kabaddi, Bengaluru Bulls, Tamil Thalaivas