DENMARK OPEN: ಪ್ರಣಯ್, ಲಕ್ಷ್ಯ ಮುನ್ನಡೆ, ಸೈನಾಗೆ ನಿರಾಸೆ
ಭಾರತದ ಭರವಸೆಯ ಆಟಗಾರರಾದ ಎಚ್.ಎಸ್ ಪ್ರಣಯ್ (PRANNOY H. S.) ಲಕ್ಷ್ಯ ಸೇನ್ (Lakshya SEN) ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಂದಿನ ಹಂತ ತಲುಪಿದ್ದಾರೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಸೈನಾ ನೈಹ್ವಾಲ್ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಲಕ್ಷ್ಯ 21-16, 21-12 ರಿಂದ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಜಿಂಟಿಂಗ್ ವಿರುದ್ಧ 39 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.
ಇನ್ನೊಂದು ಪುರುಷರ ಸಿಂಗಲ್ಸ್ ನಲ್ಲಿ ಎಚ್.ಎಸ್ ಪ್ರಣಯ್ 21-13, 22-20 ರಿಂದ , ಚೀನಾದ ಝಾವೋ ಜುನ್ ಪೆಂಗ್ ವಿರುದ್ಧ 43 ನಿಮಿಷಗಳ ನಡೆದ ಹೋರಾಟದಲ್ಲಿ ಜಯ ಸಾಧಿಸಿದರು. ಮೊದಲ ಗೇಮ್ ಸುಲಭವಾಗಿ ಗೆದ್ದ ಪ್ರಣಯ್, ಎರಡನೇ ಗೇಮ್ ನಲ್ಲಿ ಎದುರಾಳಿ ಆಟಗಾರನಿಂದ ಸವಾಲು ಎದುರಿಸಬೇಕಾಯಿತು. ಕೊನೆಯಲ್ಲಿ ಸತತ ಅಂಕಗಳನ್ನು ಕಲೆ ಹಾಕಿದ ಪ್ರಣಯ್ ಮುನ್ನಡೆ ಪಡೆದರು.

ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ನಲ್ಲಿ ಆಘಾತ ಕಂಡರು. ಇವರು 17-21, 21-19, 11-21 ರಿಂದ ಚೀನಾದ ಜಾಂಗ್ ವೈ ಮನ್ ವಿರುದ್ಧ ನಿರಾಸೆ ಕಂಡರು. ಇವರು 48 ನಿಮಿಷದ ಹೋರಾಟದಲ್ಲಿ ಸೋಲು ಕಂಡರು.
DENMARK OPEN, Pranay, Lakshya, Saina, Bwf