Pro Kabaddi: ರೋಚಕ ಪಂದ್ಯ ಗೆದ್ದ ಬೆಂಗಳೂರು ಬುಲ್ಸ್
ಕೊನೆಯ ಕ್ಷಣದವರೆಗೂ ಸ್ಥಿರ ಪ್ರದರ್ಶನ ನೀಡಿದ ಆತಿಥೇಯ ಬೆಂಗಳೂರು ಬುಲ್ಸ್ 41-39 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿತು. ಈ ಮೂಲಕ ಎರಡೂ ಪಂದ್ಯಗಳನ್ನು ಗೆದ್ದ ಬುಲ್ಸ್ ಸದ್ಯ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸ್ಟಾರ್ ರೈಡರ್ ಭರತ್ ಹಾಗೂ ವಿಕಾಸ್ ಕಂಡೋಲಾ ಸೊಗಸಾದ ಪ್ರದರ್ಶನ ನೀಡಿದರು. ಭರತ್ ಒಟ್ಟಾರೆ 14 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 10 ಟಚ್ ಪಾಯಿಂಟ್ ಹಾಗೂ 2 ಬೋನಸ್ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ವಿಕಾಸ್ ಕಂಡೋಲಾ 20 ಬಾರಿ ರೈಡ್ ಮಾಡಿ 7 ಟಚ್ ಪಾಯಿಂಟ್, 4 ಬೋನಸ್ ಪಾಯಿಂಟ್ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಟ್ಯಾಕಲ್ ನಲ್ಲಿ ಸೌರಭ್, ಅಮನ್ ತಲಾ ಮೂರು ಅಂಕ ಸೇರಿಸಿತು.
ಬೆಂಗಳೂರು ತಂಡ ಮೊದಲಾವಧಿಯಲ್ಲಿ 28-14 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆಯಲ್ಲಿ 17 ಬಾರಿ ರೈಡಿಂಗ್ ನಲ್ಲಿ, 6 ಟ್ಯಾಕಲ್ ನಲ್ಲಿ ಕಲೆ ಹಾಕಿತು. ಈ ವೇಳೆ ಪುಣೇರಿ ಎರಡು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪುಣೇರಿ ತಂಡ ಅಬ್ಬರಿಸಿತು. ಈ ಅವಧಿಯಲ್ಲಿ ಪುಣೇರಿ 25-13 ಅಂಕಗಳನ್ನು ಕಲೆ ಹಾಕಿತು. ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬೆಂಗಳೂರು ಜಯ ಸಾಧಿಸಿತು.
Pro Kabaddi, Bengaluru Bulls, Puneri Paltan