ಡೆವೊನ್ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರೆವಿನಿಂದ ಆತಿಥೇಯ ನ್ಯೂಜಿಲೆಂಡ್ ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ತ್ರಿಕೋನ ಟಿ20 ಸರಣಿಯಲ್ಲಿ ಕೇನ್ ಪಡೆ ಮೊದಲ ಗೆಲುವು ದಾಖಲಿಸಿದೆ.
ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಕಲೆ ಹಾಕಿತು.ನ್ಯೂಜಿಲೆಂಡ್ 17.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 142 ರನ್ ಪೇರಿಸಿತು.
138 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡದ ಪರ ಫಿನ್ ಆಲೆನ್ 16, ಡೆವೊನ್ ಕಾನ್ವೆ (51 ಎಸೆತ, 7 ಬೌಂಡರಿ, 1 ಸಿಕ್ಸರ್, ಅಜೇಯ 70 ರನ್ ಗಳಿಸಿದರು), ನಾಯಕ ಕೇನ್ ವಿಲಿಯಮ್ಸನ್ 30, ಗ್ಲೇನ್ ಫಿಲೀಪ್ಸ್ ಅಜೇಯ 23 ರನ್ ಗಳಿಸಿದರು.
ಇದಕ್ಕೂ ಮುನ್ನ ಬಾಂಗ್ಲಾ ಪರ ನಜ್ಮೂಲ್ ಹುಸೇನ್ 33, ಲಿಟನ್ ದಾಸ್ 15, ಆಫೀಫ್ ಹುಸೇನ್ 24, ನೂರೂಲ್ ಹಸನ್ ಅಜೇಯ 25, ನಾಯಕ ಶಕೀಬ್ ಹಲ್ ಹಸನ್ 16 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಬೌಲ್ಟ್ ತಲಾ 2 ವಿಕೆಟ್ ಪಡೆದರು.14ಕ್ಕೆ 2 ವಿಕೆಟ್ ಪಡೆದ ಮೈಕಲ್ ಬ್ರೇಸ್ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
T-20 Tri-series in New Zealand