ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ಸಂಜೂ ಸ್ಯಾಮ್ಸನ್(54) ಅರ್ಧಶತಕದ ನೆರೆವಿನೊಂದಿಗೆ ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 152 ರನ್ಗಳಿಸಿತು.
ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ಗೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಆದರೆ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ರಾಜಸ್ಥಾನ್, 20 ಓವರ್ಗಳಲ್ಲಿ 5 ವಿಕೆಟ್ಗೆ 152 ರನ್ಗಳಿಸಿತು. ರಾಜಸ್ಥಾನ್ ಪರ ಸಂಜೂ ಸ್ಯಾಮ್ಸನ್(54), ಹೆಟ್ಮಾಯೆರ್(27*) ಹಾಗೂ ಜಾಸ್ ಬಟ್ಲರ್(22) ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಸರೆಯಾದರು.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್(2) ಬಹುಬೇಗನೆ ನಿರ್ಗಮಿಸಿದರು. ನಂತರ ನಿಧಾನಗತಿಯ ಆಟವಾಡಿದ ಜಾಸ್ ಬಟ್ಲರ್(22) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಆದರೆ ಬಟ್ಲರ್ ಹಾಗೂ ಸಂಜೂ ಸ್ಯಾಮ್ಸನ್ 2ನೇ ವಿಕೆಟ್ಗೆ 48 ರನ್ಗಳ ಉಪಯುಕ್ತ ಜೊತೆಯಾಟದ ಕಾಣಿಕೆ ನೀಡಿದರು. ನಂತರ ಕಣಕ್ಕಿಳಿದ ಕರುಣ್ ನಾಯರ್(13) ಸಹ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಕರುಣ್ ನಾಯರ್ ಹಾಗೂ ಸಂಜೂ ಸ್ಯಾಮ್ಸನ್ 3ನೇ ವಿಕೆಟ್ಗೆ 35 ರನ್ಗಳ ಜೊತೆಯಾಟವಾಡಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಎಚ್ಚರಿಕೆಯ ಆಟವಾಡಿದ ನಾಯಕ ಸಂಜೂ ಸ್ಯಾಮ್ಸನ್ 54 ರನ್(49 ಬಾಲ್, 7 ಬೌಂಡರಿ, 1 ಸಿಕ್ಸ್) ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ 4ನೇ ಕ್ರಮಾಂಕದಲ್ಲಿ ಬಂದ ರಿಯಾನ್ ಪರಾಗ್(19) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ 27*(13) ರನ್ಗಳು ಹಾಗೂ ಆರ್. ಅಶ್ವಿನ್ 6* ರನ್ ಕಲೆಹಾಕಿದರು. ಆ ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟುವಂತೆ ಮಾಡಿದರು.
ಸಂಘಟಿತ ಬೌಲಿಂಗ್ ಪ್ರದರ್ಶಿಸಿದ ಕೆಕೆಆರ್ ಬೌಲರ್ಗಳು, ರಾಜಸ್ಥಾನ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಕೆಕೆಆರ್ ಪರ ಉಮೇಶ್ ಯಾದವ್(1/24), ಟಿಮ್ ಸೌಥಿ(2/46), ಅನುಕೂಲ್ ರಾಯ್(1/28), ಶಿವಂ ಮಾವಿ(1/33) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.