IPL 2022- DC Vs SRH – ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆ…? ಯಶ್ ಧೂಲ್ ಗೆ ಸಿಗುತ್ತಾ ಚಾನ್ಸ್..? Delhi Capitals Probable XIs

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಹೋರಾಟ ನಡೆಸಲಿವೆ.
ಮೇ 5ರಂದು ಮುಂಬೈನ ಬ್ರಬೋರ್ನ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವನ್ನೇ ಎದುರು ನೋಡುತ್ತಿವೆ.
ಈ ಹಿಂದೆ ಸನ್ ರೈಸರ್ಸ್ ಹೈದ್ರಬಾದ್ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ಮೊದಲ ಬಾರಿ ವಿರುದ್ಧವಾಗಿ ಆಡುತ್ತಿದ್ದಾರೆ. ಹಾಗೇ ಉಭಯ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲು ಅನುಭವಿಸಿವೆ. ಹೀಗಾಗಿ ಗೆಲುವಿನ ಲಯ ಕಂಡುಕೊಳ್ಳಲು ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿಕೊಂಡಿವೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಹೇಳುವುದಾದ್ರೆ, ಸೋಲು ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಸದ್ಯದ ಮಟ್ಟಿಗೆ ಪ್ಲೇ ಆಫ್ ಕನಸು ಬಹಳ ದೂರದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನುಳಿದ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆದ್ರೆ ರನ್ ರೇಟ್ ಪ್ಲಸ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಮುಖ್ಯವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೆಚ್ಚಾಗಿ ಡೇವಿಡ್ ವಾರ್ನರ್ ಆಟವನ್ನೇ ನೆಚ್ಚಿಕೊಂಡಿದೆ. ನಾಯಕ ರಿಷಬ್ ಪಂತ್ ಒತ್ತಡಕ್ಕೆ ಸಿಲುಕಿ ಆಡುತ್ತಿದ್ದಾರೆ. ಪೃಥ್ವಿ ಶಾ ಸ್ಫೋಟಕ ಆಟವನ್ನು ಆಡಿದ್ರೂ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿಲ್ಲ. ಆಲ್ ರೌಂಡರ್ ಮಿಟ್ಚೆಲ್ ಮಾರ್ಶ್ ಅವರಿಂದ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಯಶ್ ಧೂಲ್ ಗೆ ಅವಕಾಶ ನೀಡಬಹುದು. ಇನ್ನೊಂದೆಡೆ ಲಲಿತ್ ಯಾದವ್ ಸ್ಥಾನ ಕೂಡ ಅಲುಗಾಡುತ್ತಿದೆ. IPL 2022-Match No 50- DC Vs SRH -Delhi Capitals Probable XIs
ಇನ್ನು ರೊವ್ಮನ್ ಪೊವೆಲ್ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಆದ್ರೂ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.

ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಕೂಡ ಮೊನಚು ಕಳೆದುಕೊಂಡಂತೆ ಭಾಸವಾಗುತ್ತಿದೆ. ಮುಷ್ತಾಫಿಝುರ್ ರಹಮಾನ್ ಮತ್ತು ಕುಲದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಬೌಲರ್. ಚೇತನ್ ಸಕಾರಿಯ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ.
ಈ ನಡುವೆ, ಆನ್ರಿಚ್ ನೊಕಿಯಾ 11ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಒಟ್ಟಾರೆ, ಗೊಂದಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೆಡ್ ಕೋಚ್ ರಿಕಿ ಪಾಂಟಿಂಗ್ ಅಭಯವಂತೂ ಇದ್ದೇ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಪೃಥ್ವಿ ಶಾ
ಡೇವಿಡ್ ವಾರ್ನರ್
ರಿಷಬ್ ಪಂತ್ (ನಾಯಕ- ವಿಕೆಟ್ ಕೀಪರ್)
ಯಶ್ ಧೂಲ್ / ಮಿಟ್ಚೆಲ್ ಮಾರ್ಶ್
ಲಲಿತ್ ಯಾದವ್ / ಯಶ್ ಧೂಲ್
ರೊವ್ಮನ್ ಪೊವೆಲ್
ಅಕ್ಷರ್ ಪಟೇಲ್
ಶಾರ್ದೂಲ್ ಥಾಕೂರ್
ಕುಲದೀಪ್ ಯಾದವ್
ಮುಷ್ತಾಫಿಝುರ್ ರಹಮಾನ್
ಚೇತನ್ ಸಕಾರಿಯ