IPL 2022- Macth No 50- DC Vs SRH – ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸ್ ಆಗುತ್ತಾ ? SunRisers Hyderabad Probable XIs

ಮೇ 5. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 50. ಮುಂಬೈನ ಬ್ರಬೋರ್ನ್ ಅಂಗಣ. ಸಮಯ ರಾತ್ರಿ 7.30. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ಮುಖಾಮುಖಿ.
ಸೈಲೆಂಟ್ ಕಿಲ್ಲರ್ಸ್ ಆಗಿ ಐಪಿಎಲ್ ನಲ್ಲಿ ಸದ್ದು ಮಾಡುತ್ತಿರುವ ತಂಡ ಸನ್ ರೈಸರ್ಸ್ ಹೈದ್ರಬಾದ್. ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಸಿಎಸ್ ಕೆ ವಿರುದ್ಧ ಸೋಲು ಅನುಭವಿಸಿತ್ತು. ಇದೀಗ ಮತ್ತೆ ಗೆಲುವಿನತ್ತ ಚಿತ್ತವನ್ನಿಟ್ಟಿದೆ.
ಆಡಿರುವ 9 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದುಕೊಂಡಿರುವ ಎಸ್ ಆರ್ ಎಚ್ ತಂಡ, ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಸದ್ಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಹೀಗಾಗಿ ಪ್ಲೇ ಆಫ್ ಎಂಟ್ರಿಪಡೆಯಲು ಸನೀಹದಲ್ಲಿರುವ ಎಸ್ ಆರ್ ಎಚ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. IPL 2022- Macth No 50- DC Vs SRH -SunRisers Hyderabad Probable XIs
ಬ್ಯಾಟಿಂಗ್ ಗಿಂತಲೂ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ವಿಲಿಯಮ್ಸನ್ ಬಳಗ, ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ ದುಃಸಪ್ನವಾಗಿ ಕಾಡಲಿದೆ.
ಘಾತಕ ವೇಗಿ ಉಮ್ರಾನ್ ಮಲ್ಲಿಕ್ ತಂಡದ ಟ್ರಂಪ್ ಕಾರ್ಡ್ ಬೌಲರ್. 150ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಉಮ್ರಾನ್ ಮಲ್ಲಿಕ್, ಡೇವಿಡ್ ವಾರ್ನರ್, ಪೃಥ್ವಿ ಶಾ ಮತ್ತು ರಿಷಬ್ ಪಂತ್ ಗೆ ಯಾವ ರೀತಿ ಸವಾಲು ಹಾಕ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.

ಇನ್ನುಳಿದಂತೆ ಅನುಭವಿ ಭುವನೇಶ್ವರ್ ಕುಮಾರ್, ಯಾರ್ಕರ್ ಕಿಂಗ್ ಟಿ. ನಟರಾಜನ್ ಮತ್ತು ಮಾರ್ಕೊ ಜಾನ್ಸೆನ್ ತಂಡದಲ್ಲಿರುವ ವೇಗದ ಅಸ್ತ್ರಗಳು.
ಇನ್ನೊಂದೆಡೆ ವಾಸಿಂಗ್ಟನ್ ಸುಂದರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್ 11 ರಬಳಗದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಹಾಗೇ ಕೂಲ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದ್ರೆ, ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಆಡೇನ್ ಮಾಕ್ರ್ರಮ್ ಮತ್ತು ನಿಕೊಲಾಸ್ ಪೂರನ್ ತಂಡಕ್ಕೆ ಆಧಾರವಾಗಲಿದ್ದಾರೆ.
ಒಟ್ಟಿನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ರೋಚಕವಾಗಿ ಸಾಗಲಿದೆ. ಅಲ್ಲದೆ ಡೆಲ್ಲಿ ಬ್ಯಾಟರ್ ಗಳು ವರ್ಸಸ್ ಸನ್ ರೈಸರ್ಸ್ ಬೌಲರ್ ಗಳ ಕದನ ಅಂತ ಹೇಳಿದ್ರೂ ತಪ್ಪಾಗಲ್ಲ.
ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೇನ್ ಮಾಕ್ರ್ರಮ್
ನಿಕೊಲಾಸ್ ಪೂರನ್
ವಾಷಿಂಗ್ಟನ್ ಸುಂದರ್
ಶಶಾಂಕ್ ಸಿಂಗ್
ಮಾಕ್ರೊ ಜಾನ್ಸೆನ್
ಭುವನೇಶ್ವರ್ ಕುಮಾರ್
ಟಿ. ನಟರಾಜನ್
ಉಮ್ರಾನ್ ಮಲ್ಲಿಕ್