IPL 2022- DC – David Warner ಅಪಮಾನಕ್ಕೆ ಪ್ರತಿಕಾರ – ಸನ್ ರೈಸರ್ಸ್ ವಿರುದ್ಧ ಘರ್ಜಿಸಿದ್ದ ಡೇವಿಡ್ ವಾರ್ನರ್..!
ಡೇವಿಡ್ ವಾರ್ನರ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡದ ನಡುವಿನ ಬಾಂಧವ್ಯಕ್ಕೆ ಸುಮಾರು ಏಳು ವರ್ಷಗಳ ನಂಟಿತ್ತು.
2015ರಿಂದ 2021ರವರೆಗೆ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಿದ್ದರು. 2016ರಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಪ್ರಶಸ್ತಿ ಗೆದ್ದಾಗ ಡೇವಿಡ್ ವಾರ್ನರ್ ನಾಯಕನಾಗಿದ್ದರು.
ಸನ್ ರೈಸರ್ಸ್ ತಂಡದ ನಾಯಕನಾಗಿ, ಆಟಗಾರನಾಗಿ ಡೇವಿಡ್ ವಾರ್ನರ್ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದರು.
ಅದೇ ರೀತಿ ಡೇವಿಡ್ ವಾರ್ನರ್ ಕೂಡ ಎಸ್ ಆರ್ ಎಚ್ ತಂಡದ ಮೇಲೆ ಪ್ರೀತಿಯನ್ನಿಟ್ಟುಕೊಂಡಿದ್ದರು. ತೆಲುಗು ಚಿತ್ರಗಳ ಹಾಡಿಗಂತೂ ಡೇವಿಡ್ ವಾರ್ನರ್ ಮನಸೋತಿದ್ದರು. ಅನೇಕ ಬಾರಿ ತನ್ನ ಮಕ್ಕಳು ಮತ್ತು ಪತ್ನಿ ಜೊತೆ ತೆಲುಗು ಹಾಡಿಗೆ ಡಾನ್ಸ್ ಮಾಡಿಕೊಂಡು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.
ಅಂದ ಹಾಗೇ 2021ರ ವರೆಗೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಡೇವಿಡ್ ವಾರ್ನರ್ ನಾಯಕತ್ವದಲ್ಲಿ 2021ರಲ್ಲಿ ಸನ್ ರೈಸರ್ಸ್ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಹೀಗಾಗಿ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ತಂಡದ ಹಿರಿಯ ಆಟಗಾರನಾಗಿದ್ದ ಡೇವಿಡ್ ವಾರ್ನರ್ ಗೆ ಮತ್ತೆ ಅವಮಾನ ಮಾಡಲಾಗಿತ್ತು. ಯಾಕಂದ್ರೆ ಕೆಲವೊಂದು ಪಂದ್ಯಗಳಲ್ಲಿ ವಾರ್ನರ್ ಗೆ 11ರ ಬಳಗದಲ್ಲೂ ಸ್ಥಾನ ನೀಡಿರಲಿಲ್ಲ. ಇದರಿಂದ ಡೇವಿಡ್ ವಾರ್ನರ್ ಅವಮಾನ ನೋವು ಎಲ್ಲವನ್ನೂ ಅನುಭವಿಸಿದ್ದರು.
ಆದ್ರೆ 2022ರ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿತ್ತು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ಮೇಷಿನ್ ಆಗಿರುವ ವಾರ್ನರ್ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. IPL 2022- DC – David Warner remained unbeaten on 92 against SRH
ಅಂದ ಹಾಗೇ ಡೇವಿಡ್ ವಾರ್ನರ್ ಅವರು ಸುಮಾರು ಏಳು ವರ್ಷಗಳ ನಂತರ ಸನ್ ರೈಸರ್ಸ್ ತಂಡದ ವಿರುದ್ಧ ಆಡುತ್ತಿದ್ದಾರೆ. ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್ ಎಸ್ ಆರ್ ಎಚ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು.

ಆದ್ರೆ ಎರಡನೇ ಪಂದ್ಯ ಅಂದ್ರೆ ಟೂರ್ನಿಯ 50ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದರು. ಎಸ್ ಆರ್ ಎಚ್ ತಂಡದ ಬಲಿಷ್ಠ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ್ದ ವಾರ್ನರ್ ಅಜೇಯ 92 ರನ್ ಸಿಡಿಸಿದ್ರು. ಅಲ್ಲದೆ ರೊವ್ಮನ್ ಪೊವೆಲ್ ಜೊತೆ ಸೇರಿಕೊಂಡು ಅಜೇಯ 122 ರನ್ ಕೂಡ ದಾಖಲಿಸಿದ್ದರು.
ಇನ್ನು ಡೇವಿಡ್ ವಾರ್ನರ್ ಗೆ ಶತಕ ದಾಖಲಿಸುವ ಅವಕಾಶವಿತ್ತು. 20ನೇ ಓವರ್ ನಲ್ಲಿ ರೊವ್ಮನ್ ಪೊವೆಲ್ ಒಂಟಿ ರನ್ ಗಳಿಸಿ ಸ್ಟ್ರೈಕ್ ನೀಡುವ ಮನಸ್ಸು ಮಾಡಿದ್ದರು. ಈ ಬಗ್ಗೆ ಡೇವಿಡ್ ವಾರ್ನರ್ ಜೊತೆ ಚರ್ಚೆ ಕೂಡ ನಡೆಸಿದ್ದರು. ಆದ್ರೆ ವಾರ್ನರ್ ರೊವ್ಮನ್ ಸಲಹೆಯನ್ನು ತಿರಸ್ಕರಿಸಿದ್ರು. ನೀನು ನಿನ್ನ ಆಟವನ್ನು ಆಡು. ನೀನು ಹೊಡಿ. ಶತಕ ಮುಖ್ಯವಲ್ಲ. ತಂಡದ ಗೆಲುವು ಮುಖ್ಯ ಎಂದು ವಾರ್ನರ್ ಹೇಳಿದ್ದರು.
ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಡೇವಿಡ್ ವಾರ್ನರ್ ಎಂದಿಗೂ ಯಾವ ತಂಡಕ್ಕೂ ಭಾರವಾಗುವುದಿಲ್ಲ. ಗೆಲ್ಲುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ. ವಾರ್ನರ್ ಬದ್ಧತೆ ಮತ್ತು ಸಾಮಥ್ರ್ಯವನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಅಷ್ಟರ ಮಟ್ಟಿಗೆ ವಾರ್ನರ್ ಫ್ರಾಂಚೈಸಿಯನ್ನು ನಂಬುತ್ತಾರೆ.
ಆದ್ರೆ ಎಸ್ ಆರ್ ಎಚ್ ಟೀಮ್ ಮ್ಯಾನೇಜ್ ಮೆಂಟ್ ಮಾಡಿರುವ ಅಪಮಾನಕ್ಕೆ ತಕ್ಕ ಪ್ರತಿಕಾರವನ್ನು ಡೇವಿಡ್ ವಾರ್ನರ್ ತೀರಿಸಿಕೊಂಡಿದ್ದಾರೆ.