ಮೊಯಿನ್ ಅಲಿ(93) ಜವಾಬ್ದಾರಿಯುತ ಬ್ಯಾಟಿಂಗ್ ನಡುವೆಯೂ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ಪರಿಣಾಮ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 150 ರನ್ಗಳಿಸಿದೆ.
ಬ್ರೆಬೋರ್ನ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿತು. ಪರಿಣಾಮ ಸಿಎಸ್ಕೆ 20 ಓವರ್ಗಳಲ್ಲಿ 6 ವಿಕೆಟ್ಗೆ 150 ರನ್ಗಳಿಸಿತು. ಮೊಯಿನ್ ಅಲಿ(93) ಹಾಗೂ ನಾಯಕ ಧೋನಿ(26) ತಂಡಕ್ಕೆ ಆಸರೆಯಾದರು.
ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್ನಲ್ಲಿ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(2) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಉತ್ತಮವಾಗಿ ಆಡುವ ನಿರೀಕ್ಷೆ ಮೂಡಿಸಿದ್ದ ಡ್ವೇನ್ ಕಾನ್ವೆ(16) ತಂಡಕ್ಕೆ ಆಸರೆಯಾಗಲಿಲ್ಲ. ನಂತರ ಕಣಕ್ಕಿಳಿದ ಜಗದೀಸನ್(1) ಹಾಗೂ ಅಂಬಟಿ ರಾಯುಡು(3) ಬಹುಬೇಗನೆ ನಿರ್ಗಮಿಸಿದರು. ಪರಿಣಾಮ ಪವರ್-ಪ್ಲೇನಲ್ಲಿ 75 ರನ್ಗಳಿಸಿದ್ದ ಸಿಎಸ್ಕೆ, ಕೇವಲ 20 ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
![IPL 2022: ಕುಸಿದ ಚೆನ್ನೈಗೆ ಮೊಯಿನ್ ಅರ್ಧಶತಕದ ಆಸರೆ: ರಾಜಸ್ಥಾನಕ್ಕೆ 151 ರನ್ ಟಾರ್ಗೆಟ್ 3 MOEEN ALI](http://sportskarnataka.com/wp-content/uploads/2022/05/MOEEN-ALI.jpg)
ಮೊಯಿನ್ ಸ್ಪೋಟಕ ಆಟ:
ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ಗೆ ಮೊಯಿನ್ ಅಲಿ ಆಸರೆಯಾದರು. 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 93 ರನ್(57 ಬಾಲ್, 13 ಬೌಂಡರಿ, 3 ಸಿಕ್ಸ್) ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ್ ಬೌಲರ್ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಮೊಯಿನ್, ಬೌಂಡರಿ ಹಾಗೂ ಸಿಕ್ಸರ್ಗಳಿಂದ 93 ರನ್ಗಳ ಅದ್ಭುತ ಮೊತ್ತ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಎಂ.ಎಸ್.ಧೋನಿ(26) ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೇ ಮೊಯಿನ್ ಅಲಿ ಹಾಗೂ ಧೋನಿ 5ನೇ ವಿಕೆಟ್ಗೆ 51(52) ರನ್ಗಳ ಜೊತೆಯಾಟವಾಡಿದರು. ಪರಿಣಾಮ ಸಿಎಸ್ಕೆ 20 ಓವರ್ಗಳಲ್ಲಿ 150 ರನ್ಗಳಿಸಲು ಸಾಧ್ಯವಾಯಿತು.
![IPL 2022: ಕುಸಿದ ಚೆನ್ನೈಗೆ ಮೊಯಿನ್ ಅರ್ಧಶತಕದ ಆಸರೆ: ರಾಜಸ್ಥಾನಕ್ಕೆ 151 ರನ್ ಟಾರ್ಗೆಟ್ 4 RAJASTHAN ROYALS 1](http://sportskarnataka.com/wp-content/uploads/2022/05/RAJASTHAN-ROYALS-1.jpg)
ರಾಜಸ್ಥಾನ್ ಶಿಸ್ತಿನ ದಾಳಿ:
ಮೊಯಿನ್ ಅಲಿ ಆರ್ಭಟದಿಂದ ಪವರ್-ಪ್ಲೇನಲ್ಲಿ 75 ರನ್ ಬಿಟ್ಟುಕೊಟ್ಟಿದ್ದ ರಾಜಸ್ಥಾನ್ ಬೌಲರ್ಗಳು ನಂತರದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರು. ಶಿಸ್ತುಬದ್ಧ ಬೌಲಿಂಗ್ ಮೂಲಕ ಸಿಎಸ್ಕೆ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದ ಬೌಲರ್ಗಳು ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆದು ಮಿಂಚಿದರು. ಹೀಗಾಗಿ 6 ಓವರ್ಗಳಲ್ಲಿ 1 ವಿಕೆಟ್ಗೆ 75 ರನ್ಗಳಿಸಿದ್ದ ಚೆನ್ನೈ, ಉಳಿದ 14 ಓವರ್ಗಳಲ್ಲಿ 5 ವಿಕೆಟ್ಗೆ 75 ರನ್ಗಳಿಸಲಷ್ಟೇ ಶಕ್ತವಾಯಿತು. ರಾಜಸ್ಥಾನ್ ಪರ ಚಹಲ್ ಹಾಗೂ ಮೆಕಾಯ್ ತಲಾ 2 ವಿಕೆಟ್ ಪಡೆದರೆ. ಬೋಲ್ಟ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.