ಬ್ಯಾಟ್ಸ್ಮನ್ಗಳ ಸ್ಪೋಟಕ ಆಟಕ್ಕೆ ಸಾಕ್ಷಿಯಾಗಿರುವ15ನೇ ಆವೃತ್ತಿಯ ಐಪಿಎಲ್ನಲ್ಲಿ, ಮತ್ತೊಂದು ವೇಗದ ಅರ್ಧಶತಕ ದಾಖಲಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ಮೊಯಿನ್ ಅಲಿ, 2022ರ ಐಪಿಎಲ್ನ 2ನೇ ವೇಗದ ಅರ್ಧಶತಕ ಸಿಡಿಸಿದ್ದಾರೆ.
ಬ್ರೆಬೋರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 93(57) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್-ಪ್ಲೇ ಹಂತದ ಸಂಪೂರ್ಣ ಲಾಭ ಪಡೆದ ಮೊಯಿನ್, ಕೇವಲ 19 ಬಾಲ್ಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಪ್ರಸಕ್ತ ಸೀಸನ್ನ 2ನೇ ವೇಗದ ಅರ್ಧಶತಕ ಬಾರಿಸಿ ಮಿಂಚಿದರು. ಈ ಸೀಸನ್ನಲ್ಲಿ ದಾಖಲಾದ ಟಾಪ್-5 ವೇಗದ ಅರ್ಧಶತಕಗಳಲ್ಲಿ 4 ವೇಗದ ಅರ್ಧಶತಕ ಬ್ರೆಬೋರ್ನ್ ಮೈದಾನದಲ್ಲೇ ಬಂದಿರುವುದು ವಿಶೇಷ.
ರಾಜಸ್ಥಾನ್ ರಾಯಲ್ಸ್ ಬೌಲರ್ಗಳ ಮೇಲೆ ಪೂರ್ಣ ಹಿಡಿತ ಸಾಧಿಸಿದ ಮೊಯಿನ್, 13 ಬೌಂಡರಿ, 3 ಸಿಕ್ಸ್ ನೆರವಿನಿಂದ 93 ರನ್ಗಳ ಅದ್ಭುತ ಮೊತ್ತ ಕಲೆಹಾಕಿದರು. ಮೊಯಿನ್ ಅಲಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್, ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ 20 ಓವರ್ಗಳಲ್ಲಿ 6 ವಿಕೆಟ್ಗೆ 150 ರನ್ಗಳಿಸುವಲ್ಲಿ ಯಶಸ್ವಿಯಾಯಿತು.
ವೇಗದ ಅರ್ಧಶತಕ – IPL 2022ರಲ್ಲಿ
ಪ್ಯಾಟ್ ಕಮ್ಮಿನ್ಸ್ v MI – 14 ಬಾಲ್ಗಳು
ಮೊಯಿನ್ ಅಲಿ v RR – 19 ಬಾಲ್ಗಳು
ರಾಹುಲ್ ತ್ರಿಪಾಠಿ v KKR – 21 ಬಾಲ್ಗಳು
ಲಿಯಾಮ್ ಲಿವಿಂಗ್ಸ್ಟೋನ್ v PBKS – 21 ಬಾಲ್ಗಳು
ಜಾನಿ ಬೈರ್ಸ್ಟೋವ್ v RCB – 21 ಬಾಲ್ಗಳು