Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

IPL 2022: ಚುಟುಕು ಕ್ರಿಕೆಟ್ ನಲ್ಲಿಂದು ಸ್ನೇಹಿತರ ಸವಾಲ್; RCB ವಿರುದ್ಧ ಆಡಲಿರುವ ಚಹಲ್, ಪಡಿಕ್ಕಲ್, ಸೈನಿ

April 5, 2022
in ಕ್ರಿಕೆಟ್, Cricket
IPL 2022: ಚುಟುಕು ಕ್ರಿಕೆಟ್ ನಲ್ಲಿಂದು ಸ್ನೇಹಿತರ ಸವಾಲ್; RCB ವಿರುದ್ಧ ಆಡಲಿರುವ ಚಹಲ್, ಪಡಿಕ್ಕಲ್, ಸೈನಿ
Share on FacebookShare on TwitterShare on WhatsAppShare on Telegram

ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುತ್ತಿರುವ ಐಪಿಎಲ್ನಲ್ಲಿ ಒಂದು ಫ್ರಾಂಚೈಸಿಯಲ್ಲಿ ಆಡಿದವರು ಮುಂದಿನ ಸೀಸನ್ನಲ್ಲಿ ಬೇರೊಂದು ಫ್ರಾಂಚೈಸಿಯಲ್ಲಿ ಆಡುವುದು ಸಹಜ. ಆದರೆ 15ನೇ ಆವೃತ್ತಿಯಲ್ಲಿ ಇಂದು ನಡೆಯುತ್ತಿರುವ ‘ರಾಯಲ್ಸ್’ ಹಣಾಹಣಿ ವಿಶೇಷ ಮುಖಾಮುಖಿಗೆ ಸಾಕ್ಷಿಯಾಗಲಿದೆ.

2022ರ ಐಪಿಎಲ್ಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಹಣಾಹಣಿ ನಡೆಸುತ್ತಿವೆ. ಉಭಯ ತಂಡಗಳ ಇಂದಿನ ಪಂದ್ಯ ದಾಯಾದಿಗಳ ಕಲಹ ಎಂದರೆ ತಪ್ಪಾಗಲಾರದು ಐಪಿಎಲ್ನಲ್ಲಿ ಈ ಹಿಂದೆಯೂ ಕರ್ನಾಟಕದ ಹಲವು ಆಟಗಾರರು ರಾಜಸ್ಥಾನ್ ರಾಯಲ್ಸ್ನಲ್ಲಿ ಆಡಿದ್ದಾರೆ. ಇದರ ನಡುವೆ ಇಂದಿನ ಐಪಿಎಲ್ನಲ್ಲಿ ಹಲವು ವರ್ಷಗಳ ಕಾಲ ಒಂದೇ ತಂಡದಲ್ಲಿ ಆಡಿದ್ದ ಮೂವರು ಆಟಗಾರರು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ.

20220405 161608

2014ರ ಐಪಿಎಲ್ನಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡದ್ದ ಯಜುವೇಂದ್ರ ಚಹಲ್, ಇದೀಗ ಇಷ್ಟು ವರ್ಷಗಳ ಕಾಲ ತಾವು ಆಡಿದ ಆರ್ಸಿಬಿ ತಂಡದ ವಿರುದ್ಧ ಹಣಾಹಣಿ ನಡೆಸಲು ಸಜ್ಜಾಗಿದ್ದಾರೆ. ಐಪಿಎಲ್ಗೆ ಎಂಟ್ರಿಕೊಟ್ಟ ದಿನದಿಂದ 2021ರ ಐಪಿಎಲ್ವರೆಗೂ ಆರ್ಸಿಬಿಯ ಸ್ಪಿನ್ ಅಸ್ತ್ರವಾಗಿದ್ದ ಚಹಲ್, ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಬೇರೆ ಫ್ರಾಂಚೈಸಿ ಪರ ಆಡುತ್ತಿದ್ದಾರೆ. 2014ರಲ್ಲಿ ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಚಹಲ್, ಇದೀಗ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಈಗಾಗಲೇ ತಮ್ಮ ಸ್ಪಿನ್ ಮೋಡಿ ಮಾಡಿರುವ ಯಜುವೇಂದ್ರ ಚಹಲ್, ಇಂದಿನ ಪಂದ್ಯದಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

20220405 161601

ಇನ್ನು ಆರ್ಸಿಬಿ ತಂಡದಲ್ಲಿ ಆಡಿ, ಇದೀಗ ರಾಜಸ್ಥಾನ್ ಪರ ಆಡುತ್ತಿರುವ ಮತ್ತೋರ್ವ ಆಟಗಾರ ದೇವದತ್ ಪಡಿಕ್ಕಲ್, 2018ರಲ್ಲಿ ಆರ್ಸಿಬಿ ಗೂಡು ಸೇರಿದ್ದ ಪಡಿಕ್ಕಲ್, 2020 ಹಾಗೂ 2021ರಲ್ಲಿ ಬೆಂಗಳೂರು ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿ ಅಬ್ಬರಿಸಿದ್ದರು. ಕಳೆದೆರಡು ಸೀಸನ್ಗಳಲ್ಲಿ ಪಡಿಕ್ಕಲ್ ಪ್ರದರ್ಶನ ಕಂಡ, ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕನ್ನಡಿಗನನ್ನ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

20220405 161605

ಇವರಿಬ್ಬರಂತೆ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡಿ ಬೆಳೆದಿರುವ ಮತ್ತೋರ್ವ ಆಟಗಾರ, ನವದೀಪ್ ಸೈನಿ, ಐಪಿಎಲ್ನಲ್ಲಿ ನವದೀಪ್ ಸೈನಿ ದೊಡ್ಡಮಟ್ಟದ ಸಕ್ಸಸ್ ಕಾಣದಿದ್ದರೂ, ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿದ್ದರು. ನವದೀಪ್ ಸೈನಿ ಕೂಡ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

ಒಟ್ಟಾರೆ ಆರ್ಸಿಬಿ ತಂಡದಲ್ಲಿ ಆಡಿ. ಬೆಳೆದಿರುವ ಈ ಮೂವರು ಆಟಗಾರರು, ಇಂದು ತಮ್ಮ ನೆಲೆಬಿಟ್ಟು ಹೋಗಿದ್ದಾರೆ. ವರ್ಷಗಳ ಕಾಲ ಬೆಂಗಳೂರು ತಂಡದ ಆಳ-ಅಗಲ, ತಂತ್ರ-ಪ್ರತಿತಂತ್ರಗಳನ್ನು ಅರಿತಿರುವ ಈ ತ್ರಿಮೂರ್ತಿಗಳ ಇಂದು ತಮ್ಮ ಸ್ನೇಹಿತರ ವಿರುದ್ಧ ಯಾವ ರೀತಿ ಅಬ್ಬರಿಸುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Devdutt Padikkalipl 2022navdeep sainiRajasthan RoyalsRoyal Challengers BangaloreYuzvendra Chahal
ShareTweetSendShare
Next Post
csk dhoni ravindra jadeja sports karnataka ipl 2022

IPL: ಮುಂಬೈ, ಸಿಎಸ್​​ಕೆ ಸಮಸ್ಯೆ ಏನು..? ಸೋಲಿಗೆ ಕಾರಣವಾಗ್ತಿದೆಯಾ ಕಾಂಬಿನೇಷನ್​​​..?

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram