ಚಾಣಾಕ್ಷ ಸ್ಪಿನ್ ಮೂಲಕ ದಿಗ್ಗಜ ಬ್ಯಾಟ್ಸ್ಮನ್ಗಳಿಗೆ ಮಣ್ಣುಮುಕ್ಕಿಸಿ ಕಮಾಲ್ ಮಾಡಿರುವ ಯುಜುವೇಂದ್ರ ಚಹಲ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸದೊಂದು ಸಾಧನೆ ಮಾಡಿದ್ದಾರೆ.
ಐಪಿಎಲ್ನಲ್ಲಿ ಕಳೆದ ಹಲವು ಸೀಸನ್ಗಳಲ್ಲಿ ಮಿಂಚುತ್ತಿರುವ ಚಹಲ್, 15ನೇ ಆವೃತ್ತಿಯಲ್ಲೂ ಸ್ಪಿನ್ ಮೋಡಿ ಮಾಡಿದ್ದಾರೆ. ಪ್ರಸಕ್ತ ಸೀಸನ್ನಲ್ಲಿ 26 ವಿಕೆಟ್ ಕಬಳಿಸಿರುವ ಚಹಲ್, ಐಪಿಎಲ್ನಲ್ಲಿ ಸೀಸನ್ ಒಂದರಲ್ಲಿ ಸ್ಪಿನ್ನರ್ಗಳ ಪರ ಅತಿಹೆಚ್ಚು ವಿಕೆಟ್ಸ್ ಪಡೆದ ಹೆಗ್ಗಳಿಕೆ ಪಡೆದಿದ್ದಾರೆ. ಆ ಮೂಲಕ 2019ರಲ್ಲಿ ಸೌತ್ ಆಫ್ರಿಕಾ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್ (26 ವಿಕೆಟ್ಗಳು) ಹೆಸರಿನಲ್ಲಿ ದಾಖಲೆಯನ್ನ ಹಿಂದಿಕ್ಕಿದ್ದಾರೆ.
2022ರ ಐಪಿಎಲ್ನಲ್ಲಿ ʼಪರ್ಪಲ್ ಕ್ಯಾಪ್ʼ ತಮ್ಮದಾಗಿಸಿಕೊಂಡಿರುವ ಚಹಲ್, ಆಡಿರುವ 14 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 40/5 ವಿಕೆಟ್ ಪಡೆದಿರುವ ಅವರು, 16.53ರ ಸರಾಸರಿ ಹಾಗೂ 7.67ರ ಎಕಾನಮಿ ಹೊಂದಿದ್ದಾರೆ. ಈಗಾಗಲೇ 26 ವಿಕೆಟ್ ಕಬಳಿಸಿರುವ ಚಹಲ್, ಈ ಸೀಸನ್ನಲ್ಲಿ ಕನಿಷ್ಠ 2 ಪಂದ್ಯವನ್ನಾದರೂ ಆಡಲಿದ್ದು, ಇನ್ನಷ್ಟು ವಿಕೆಟ್ ಪಡೆಯುವ ಸಾಧ್ಯತೆ ಇದೆ.
IPLನಲ್ಲಿ ಹೆಚ್ಚು ವಿಕೆಟ್ಸ್ ಪಡೆದಿರುವ ಸ್ಪಿನ್ನರ್ಗಳು
ಯುಜುವೇಂದ್ರ ಚಹಲ್ – 26* ವಿಕೆಟ್ಗಳು(2022)
ಇಮ್ರಾನ್ ತಾಹಿರ್ – 26 ವಿಕೆಟ್ಗಳು(2019)
ಸುನೀಲ್ ನರೈನ್ – 24 ವಿಕೆಟ್ಗಳು (2012)
ಹರ್ಭಜನ್ ಸಿಂಗ್ – 24 ವಿಕೆಟ್ಗಳು (2013)
ಯುಜುವೇಂದ್ರ ಚಹಲ್ – 23 ವಿಕೆಟ್ಗಳು (2015)