15ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಜಾಸ್ ಬಟ್ಲರ್, ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2022ರ ಐಪಿಎಲ್ ʼಆರೆಂಜ್ ಕ್ಯಾಪ್ʼ ತಮ್ಮ ಮುಡಿಗೇರಿಸಿಕೊಂಡರು.
ಪ್ರಸಕ್ತ ಸೀಸನ್ ಉದ್ದಕ್ಕೂ ಬ್ಯಾಟಿಂಗ್ ಕಮಾಲ್ ಮಾಡಿದ ಜಾಸ್ ಬಟ್ಲರ್, ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 39 ರನ್‌ಗಳ ಉಪಯುಕ್ತ ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಈ ಆವೃತ್ತಿಯಲ್ಲಿ ಆಡಿದ 17 ಪಂದ್ಯಗಳಿಂದ 57.53ರ ಬ್ಯಾಟಿಂಗ್ ಸರಾಸರಿ, 149.05ರ ಸ್ಟ್ರೈಕ್ ರೇಟ್‌ನಿಂದ 4 ಅರ್ಧಶತಕ. 4 ಶತಕ ಸಿಡಿಸಿದರು. ಆ ಮೂಲಕ ಡೇವಿಡ್ ವಾರ್ನರ್(848 ರನ್‌ಗಳ) ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಒಂದೇ ಸೀಸನ್‌ನಲ್ಲಿ 973 ರನ್‌ಗಳಿಸಿರುವ ವಿರಾಟ್ ಕೊಹ್ಲಿ, ಅಗ್ರಸ್ಥಾನದಲ್ಲಿದ್ದಾರೆ.

2016ರ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್, ಸನ್‌ರೈಸರ್ಸ್ ಹೈದ್ರಾಬಾದ್ ಪರ 17 ಪಂದ್ಯಗಳಿಂದ 60.57ರ ಸರಾಸರಿಯಲ್ಲಿ 848 ರನ್‌ಗಳಿಸಿ ಸೀಸನ್ ಒಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ 2ನೇ ಸ್ಥಾನದಲ್ಲಿದ್ದರು. ಇದೇ ಆವೃತ್ತಿಯಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ 4 ಶತಕದಿಂದ 973 ರನ್‌ಗಳಿಸಿದ್ದರು. ಕೊಹ್ಲಿ ಅವರ ಈ ಸಾಧನೆ ಇಂದಿಗೂ ಮೊದಲ ಸ್ಥಾನದಲ್ಲಿದೆ.
ಜಾಸ್ ಬಟ್ಲರ್ ಪ್ರದರ್ಶನ – IPL 2022ರಲ್ಲಿ
ಪಂದ್ಯಗಳು – 17
ರನ್‌ಗಳು – 863
ಸರಾಸರಿ – 57.53
ಸ್ಟ್ರೈಕ್ ರೇಟ್ – 149.05
50s/100s – 4/4
ಬೌಂಡರಿಗಳು – 83
ಸಿಕ್ಸರ್‌ಗಳು – 45