15ನೇ ಆವೃತ್ತಿಯಲ್ಲಿ ಅದ್ಭುತ ಯಶಸ್ಸು ಕಂಡಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರ್ಸಿಬಿ ವಿರುದ್ಧದ ಸೋಲಿನ ಆಘಾತದ ನಡುವೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದ ನಾಥನ್ ಕೌಲ್ಟರ್-ನೈಲ್ 2022ರ ಐಪಿಎಲ್ನಿಂದ ಹೊರಗುಳಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್-ನೈಲ್, ಗಾಯದ ಸಮಸ್ಯೆಯಿಂದ ತವರಿಗೆ ಮರಳುತ್ತಿದ್ದಾರೆ. ಸರ್ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆದ ಮೊದಲ ಪಂದ್ಯದ ವೇಳೆ ಕೌಲ್ಟರ್-ನೈಲ್ ಗಾಯಗೊಂಡಿದ್ದರು. ಸೈಯ್ಡ್ ಸ್ಟ್ರೇನ್ ಸಮಸ್ಯೆಯಿಂದ ಬಳಲುತ್ತಿರುವ ವೇಗದ ಬೌಲರ್ ಕೌಲ್ಟರ್-ನೈಲ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ ಎಂದು ರಾಜಸ್ಥಾನ್ ತಂಡದ ಫಿಸಿಯೋ ಜಾನ್ ಗ್ಲೋಸ್ಟರ್ ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಯಾವುದೇ ಆಟಗಾರರನ್ನ ಕಳೆದುಕೊಳ್ಳುವುದು ಕಷ್ಟದ ವಿಚಾರ. ನಾವೆಲ್ಲರೂ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದೆವು. ಆದರೆ ದುರಾದೃಷ್ಟವಶಾಕ್ ಅದು ಸಾಧ್ಯವಾಗಲಿಲ್ಲಿ. ನೀವು ನಮ್ಮ ತಂಡದ ದೊಡ್ಡ ಭಾಗವಾಗಿದ್ದು, ಶೀಘ್ರವೇ ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಕೂಡಿಕೊಳ್ಳುವುದನ್ನ ಎದುರು ನೋಡುತ್ತಿದ್ದೇವೆ ಎಂದು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಜಾನ್ ಗ್ಲೋಸ್ಟರ್ ತಿಳಿಸಿದ್ದಾರೆ.
ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆದ 2022ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ರಾಜಸ್ಥಾನ್ ರಾಯಲ್ಸ್, 2 ಕೋಟಿ ಮೊತ್ತಕ್ಕೆ ಖರೀದಿಸಿತ್ತು. 34 ವರ್ಷದ ವೇಗದ ಬೌಲರ್ ನಾಥನ್ ಕೌಲ್ಟರ್-ನೈಲ್, ಈ ಹಿಂದೆ ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಐಪಿಎಲ್ನಲ್ಲಿ ಆಡಿದ್ದಾರೆ.