Team india – ರೋಹಿತ್ ಶರ್ಮಾ ಫುಲ್ ಟೈಮ್ ಕ್ಯಾಪ್ಟನ್ ಮಾಡಿದ್ದು ಎಷ್ಟು ಸರಿ..?

ರೋಹಿತ್ ಶರ್ಮಾ.. ಈಗ ಟೀಮ್ ಇಂಡಿಯಾದ ಫುಲ್ ಟೈಮ್ ಕ್ಯಾಪ್ಟನ್. ಟಿ-20, ಏಕದಿನ ಮತ್ತು ಟೆಸ್ಟ್ ಹೀಗೆ ಮೂರು ಮಾದರಿಯ ಕ್ರಿಕೆಟ್ ಗೂ ಟೀಮ್ ಇಂಡಿಯಾದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡು ಸರಣಿ ಗೆದ್ದ ಹಿರಿಮೆ ಕೂಡ ರೋಹಿತ್ ಶರ್ಮಾ ಅವರದ್ದಾಗಿದೆ.
ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ.
ಇದೀಗ ಮುಂದಿನ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ರೋಹಿತ್ ಶರ್ಮಾ ಅವರಿಗೆ ಟೆಸ್ಟಿಂಗ್ ಟೈಮ್ ಆಗಲಿದೆ. ಅದಕ್ಕಿಂತ ಮುನ್ನ ಫೆಬ್ರವರಿ 24 ಮತ್ತು 26 ಹಾಗೂ 27ರಂದು ಟಿ-20 ಪಂದ್ಯಗಳು ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ರಿಂದ ಮತ್ತು ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ ಆರಂಭವಾಗಲಿದೆ.
ಆದ್ರೆ ಪ್ರಶ್ನೆ ಇರೋದು ರೋಹಿತ್ ಶರ್ಮಾ ಮೂರು ಮಾದರಿಯ ಟೀಮ್ ಇಂಡಿಯಾ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಿರೋದು ಎಷ್ಟು ಸರಿ ಅನ್ನೋದು.

ಆಲ್ ಮೋಸ್ಟ್ ರೋಹಿತ್ ಶರ್ಮಾ ಅವರಿಗೆ ಈಗ 35ರ ಪ್ರಾಯ. ಆದ್ರೂ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್‍ನಲ್ಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ರೋಹಿತ್ ಶರ್ಮಾಗೆ ಸಮಸ್ಯೆ ಇರೋದು ಫಿಟ್ ನೆಸ್. ಅದಕ್ಕಿಂತ ಹೆಚ್ಚಾಗಿ ಕಾಡುತ್ತಿರುವುದು ಗಾಯದ ಸಮಸ್ಯೆ.
ಈ ಹಿಂದೆ ನೋಡಿದಂತೆ ರೋಹಿತ್ ಶರ್ಮಾ ಒಂದು ಸರಣಿ ಅಥವಾ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್ ಆಡಿರುವುದು ತುಂಬಾ ಕಮ್ಮಿನೇ. ಗಾಯದ ಸಮಸ್ಯೆಯಿಂದ ಟೆಸ್ಟ್ ತಂಡದಿಂದ ದೂರವೇ ಉಳಿದುಕೊಳ್ಳುತ್ತಿದ್ದರು.
ಏಕದಿನ ಮತ್ತು ಟಿ-20 ಪಂದ್ಯಕ್ಕೆ ಅಷ್ಟೇನೂ ಸಮಸ್ಯೆ ಅಂತ ಅನ್ನಿಸುವುದಿಲ್ಲ.
ಆದ್ರೆ ನೆನಪಿಡಿ, ರೋಹಿತ್ ಶರ್ಮಾ ಇಲ್ಲಿಯವರೆಗೆ ಟೆಸ್ಟ್ ಪಂದ್ಯಗಳನ್ನು ಆಡಿದ್ದು ಬರೀ 43 ಪಂದ್ಯಗಳನ್ನು ಮಾತ್ರ. 2013, ನವೆಂಬರ್ 6ರಂದು ವೆಸ್ಟ್ ಇಂಡೀಸ್ ವಿರುದ್ದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅದು ಕೂಡ ಟೀಮ್ ಇಂಡಿಯಾಗೆ ಎಂಟ್ರಿಯಾಗಿ ಆರು ವರ್ಷಗಳ ಬಳಿಕ. ಅಂದ್ರೆ 2007ರಲ್ಲಿ ರೋಹಿತ್ ಶರ್ಮಾ ಮೊದಲ ಟಿ-20 ಮತ್ತು ಮೊದಲ ಏಕದಿನ ಪಂದ್ಯಗಳನ್ನು ಆಡಿದ್ದರು.
ಅಂದ್ರೆ 2013ರಿಂದ 2021ರ ವರೆಗೆ ರೋಹಿತ್ ಶರ್ಮಾ ಆಡಿರುವ 43 ಟೆಸ್ಟ್ ಪಂದ್ಯಗಳಲ್ಲಿ 46.88ರ ಸರಾಸರಿಯಲ್ಲಿ 3047 ರನ್ ಗಳಿಸಿದ್ದಾರೆ. ಇದರಲ್ಲಿ ಎಂಟು ಶತಕ ಹಾಗೂ 1 ದ್ವಿಶತಕ ಇದೆ. ಹಾಗಂತ ಟೆಸ್ಟ್ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ಕಳಪೆ ಪ್ರದರ್ಶನ ನೀಡಿಲ್ಲ. ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದ್ರೆ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ತಂಡದಲ್ಲಿ ಖಾಯಂ ಆಟಗಾರನಾಗಿ ಉಳಿದುಕೊಂಡಿಲ್ಲ.
ಇನ್ನು 2021ರ ಇಂಗ್ಲೆಂಡ್ ಸರಣಿಯ ನಂತರ ರೋಹಿತ್ ಶರ್ಮಾ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಇದೀಗ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದಾರೆ. How much cricket is rohit sharma going to play?

ಇನ್ನು ರೋಹಿತ್ ಶರ್ಮಾ ಎಷ್ಟು ವರ್ಷ ಕ್ರಿಕೆಟ್ ಆಡಬಹುದು ? ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿಲ್ಲ. ಒಂದಂತೂ ಸತ್ಯ, 2023ರ ವಿಶ್ವಕಪ್ ತನಕ ರೋಹಿತ್ ಶರ್ಮಾ ಏಕದಿನ ತಂಡದ ನಾಯಕನಾಗುವುದು ಖಚಿತ. ಅದೇ ರೀತಿ 2022ರ ಟಿ-20 ವಿಶ್ವಕಪ್ ಗೂ ರೋಹಿತ್ ಶರ್ಮಾ ಅವರೇ ನಾಯಕ. ಇದರಲ್ಲಿ ಅನುಮಾನವೇ ಇಲ್ಲ.
ಆದ್ರೆ ಟೆಸ್ಟ್ ತಂಡದ ನಾಯಕನಾಗಿ ಎಷ್ಟು ಸಮಯ ಮುಂದುವರಿಯಬಹುದು ಎಂಬುದು ಮುಖ್ಯ ಪ್ರಶ್ನೆಯಾಗಿ ಕಾಡುತ್ತಿದೆ. ಇದಕ್ಕೂ ಪ್ರಮುಖ ಕಾರಣ ರೋಹಿತ್ ಶರ್ಮಾ ಅವರನ್ನು ಕಾಡುತ್ತಿರುವ ಗಾಯ.
ಮೂರು ಮಾದರಿಯ ಪಂದ್ಯಗಳನ್ನು ಆಡಿದ್ರೆ ರೋಹಿತ್ ಶರ್ಮಾ ಅವರಿಗೆ ಎಲ್ಲಿ ಗಾಯದ ಸಮಸ್ಯೆ ಆಗುತ್ತೋ ಅನ್ನೋ ಆತಂಕ ಕೂಡ ಇದ್ದೇ ಇದೆ. ಹೀಗಾಗಿ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿರೋದು ಅಷ್ಟೊಂದು ಸಮಂಜಸವಲ್ಲ.
ಯಾಕಂದ್ರೆ ಟಿ-20 ವಿಶ್ವಕಪ್ ತನಕ ರೋಹಿತ್ ಶರ್ಮಾ ಫಿಟ್ ನೆಸ್ ಮತ್ತು ತನ್ನ ಗಾಯದ ಕಡೆಗೆ ಚಿತ್ತವನ್ನಿಡಲೇಬೇಕು. ಟಿ-20 ವಿಶ್ವಕಪ್ ನಂತರ ಏಕದಿನ ವಿಶ್ವಕಪ್ ನತ್ತ ಆದ್ಯತೆ ನೀಡಬೇಕಾಗುತ್ತದೆ.
ಹೀಗಾಗಿ ರೋಹಿತ್ ಶರ್ಮಾ ಅವರು ತಂಡದ ನಾಯಕನಾಗಿ, ಆಟಗಾರನಾಗಿ, ಜೊತೆಗೆ ಕಾಡುತ್ತಿರುವ ಗಾಯ ಹೀಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಇಲ್ಲಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಟೆಸ್ಟ್ ನಾಯಕತ್ವದ ವಿಚಾರದಲ್ಲಿ ತಪ್ಪು ಮಾಡಿದೆ ಅಂತ ಅನ್ನಿಸುತ್ತಿದೆ. ಟೆಸ್ಟ್ ತಂಡದ ನಾಯಕನಾಗಿ ಯುವ ಆಟಗಾರನಿಗೆ ಅವಕಾಶ ನೀಡಬೇಕಾಗಿತ್ತು. ಆದಾದ ನಂತರ ಏಕದಿನ ವಿಶ್ವಕಪ್ ನಂತರ ಪೂರ್ಣ ಪ್ರಮಾಣದಲ್ಲಿ ಬೇರೆಯವರಿಗೆ ನಾಯಕತ್ವ ವಹಿಸುತ್ತಿದ್ರೆ ಟೀಮ್ ಇಂಡಿಯಾಗೆ ಭವಿಷ್ಯದಲ್ಲಿ ತೊಂದರೆಯಾಗುತ್ತಿರಲಿಲ್ಲ. ಈ ನಡುವೆ ತಂಡದ ಉಪನಾಯಕನ ಸ್ಥಾನವನ್ನು ಕೂಡ ಒಂದೊಂದು ಸರಣಿಗೆ ಒಬ್ಬಬ್ಬೊರನ್ನು ಆಯ್ಕೆ ಮಾಡಿಕೊಂಡು ಗೊಂದಲಕ್ಕೆ ಕಾರಣವಾಗುತ್ತಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ನಾಯಕ ಅಂದ್ರೆ ಕನಿಷ್ಠ ಐದಾರು ವರ್ಷಗಳ ಕಾಲ ತಂಡವನ್ನು ಯಾರು ಮುನ್ನಡೆಸುತ್ತಾರೆ ಅನ್ನೋದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.