ಪ್ರೊ ಕಬ್ಬಡ್ಡಿ ಸೀಸನ್ 8ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಟೂರ್ನಿ ನಡೆದಿರಲಿಲ್ಲ. ಆದರೆ ಈ ಬಾರಿ ಡಿಸೆಂಬರ್ 22ರಿಂದ ಪ್ರೊ ಕಬ್ಬಡ್ಡಿ ಸೀಸನ್ ಶುರುವಾಗಲಿದೆ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ. ಈ ಬಾರಿಯೂ ಬೆಂಗಳೂರು ಬುಲ್ಸ್ ಟೂರ್ನಿಯ ಹಾಟ್ ಫೆವರೀಟ್ ತಂಡವಾಗಿದೆ.
ಬೆಂಗಳೂರು ತಂಡ ರೈಡಿಂಗ್ ಮತ್ತು ಡಿಫೆಂಡಿಂಗ್ನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಆಲ್ರೌಂಡರ್ಗಳು ತಂಡದ ಆಸ್ತಿಯಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಡ್ಲೌ ಮಹಾಲಿ, ಜಿಯೋನ್ ಲೀ, ಜಿಯಾವುರ್ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಸೂಪರ್ ಸ್ಟಾರ್ ರೈಡರ್ ಪವನ್ ಶೆಹ್ರಾವತ್ ತಂಡ ಮುನ್ನಡೆಸಲಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೀಸನ್ 8ರ ಪಂದ್ಯಗಳು ನಡೆಯಲಿದೆ. ಟೂರ್ನಿಯ ಮೊದಲಾರ್ಧದ ಶೆಡ್ಯೂಲ್ ಮಾತ್ರ ಬಿಡುಗಡೆಯಾಗಿದೆ. ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ತಿಂಗಳಲ್ಲಿ 4 ಹಾಗೂ ಜನವರಿಯಲ್ಲಿ 7 ಪಂದ್ಯಗಳನ್ನು ಆಡಲಿದೆ.
ಬೆಂಗಳೂರು ಬುಲ್ಸ್ ತಂಡದ ಮೊದಲಾರ್ಧದ ವೇಳಾಪಟ್ಟಿ
1ನೇ ಪಂದ್ಯ: ಯು ಮುಂಬಾ ಡಿಸೆಂಬರ್ 22 ಬುಧವಾರ ಸಂಜೆ 7:30
2 ನೇ ಪಂದ್ಯ: ತಮಿಳ್ ತಲೈವಾಸ್ ಡಿಸೆಂಬರ್ 24 ಶುಕ್ರವಾರ ರಾತ್ರಿ 8:30
3 ನೇ ಪಂದ್ಯ: ಬಂಗಾಲ್ ವಾರಿಯರ್ಸ್ ಡಿಸೆಂಬರ್ 26 ಭಾನುವಾರ ರಾತ್ರಿ 8:30
4 ನೇ ಪಂದ್ಯ: ಹರ್ಯಾಣ ಸ್ಟೀಲರ್ಸ್ ಡಿಸೆಂಬರ್ 30 ಗುರುವಾರ ರಾತ್ರಿ 8:30
5 ನೇ ಪಂದ್ಯ: ತೆಲುಗು ಟೈಟಾನ್ಸ್ ಜನವರಿ 1 ಶನಿವಾರ ರಾತ್ರಿ 8:30
6 ನೇ ಪಂದ್ಯ: ಪುಣೇರಿ ಪಲ್ಟಾನ್ ಜನವರಿ 2 ಭಾನುವಾರ ರಾತ್ರಿ 8:30
7 ನೇ ಪಂದ್ಯ: ಜೈಪುರ್ ಪಿಂಕ್ ಪ್ಯಾಂಥರ್ಸ್ ಜನವರಿ 6 ಗುರುವಾರ ರಾತ್ರಿ 8:30
8 ನೇ ಪಂದ್ಯ: ಯುಪಿ ಯೋದ್ಧಾ ಜನವರಿ 9 ಭಾನುವಾರ ರಾತ್ರಿ 8:30
9 ನೇ ಪಂದ್ಯ: ದಬಾಂಗ್ ಡೆಲ್ಲಿ ಜನವರಿ 12 ಬುಧವಾರ ರಾತ್ರಿ 8:30
10 ನೇ ಪಂದ್ಯ: ಗುಜರಾತ್ ಜೈಂಟ್ಸ್ ಜನವರಿ 14 ಶುಕ್ರವಾರ ರಾತ್ರಿ 8:30
11 ನೇ ಪಂದ್ಯ: ಪಾಟ್ನಾ ಪೈರೇಟ್ಸ್ ಜನವರಿ 16 ಭಾನುವಾರ ರಾತ್ರಿ 8:30