19 ವಯೋಮಿತಿ ವಿಶ್ವಕಪ್ – ಭಾರತ ಯುವ ತಂಡದ ಸಾರಥಿ ಯಶ್ ಧೂಳ್..! Yash Dhul sportskarnataka
ದೆಹಲಿಯ ಯುವ ಪ್ರತಿಭಾವಂತ ಬ್ಯಾಟ್ಸ್ ಮೆನ್ ಯಶ್ ಧೂಳ್ ಅವರು ಭಾರತ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಯುವ ಟೀಮ್ ಇಂಡಿಯಾದ ಸಾರಥಿಯಾಗಿ ನೇಮಕಗೊಂಡಿದ್ದಾರೆ.
ವೆಸ್ಟ್ ಇಂಡೀಸ್ ಆತಿಥ್ಯ ವಹಿಸಲಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿ 2022ರ ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯಲಿದೆ.
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ತಂಡ ನಾಲ್ಕು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2000, 2008, 2012 ಮತ್ತು 2018ರಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಬಾರಿಯ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧೆ ಮಾಡಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಬಿ ಬಣದಲ್ಲಿರುವ ಭಾರತ ತಂಡ, ಲೀಗ್ ನಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಉಗಾಂಡ ವಿರುದ್ಧ ಆಡಲಿದೆ.
ಉಪನಾಯಕನಾಗಿ ಆಂಧ್ರ ಪ್ರದೇಶದ ರಶೀದ್ ಅವರು ಆಯ್ಕೆಯಾಗಿದ್ದಾರೆ. ಯಶ್ ಧೂಳ್ ಮತ್ತು ರಶೀದ್ ಅವರು ಈಗಾಗಲೇ ವಿವಿಧ ವಯೋಮಿತಿ ಟೂರ್ನಿ ಸೇರಿದಂತೆ ವಿನೂ ಮಂಕಡ್ ಟೂರ್ನಿಯಲ್ಲೂ ಅಮೋಘ ಪ್ರದರ್ಶನ ನೀಡಿದ್ದರು.
ಈ ನಡುವೆ ಭಾರತ 19 ವಯೋಮಿತಿ ತಂಡ ಏಷ್ಯಾಕಪ್ ಟೂರ್ನಿಯಲ್ಲೂ ಆಡಲಿದೆ. ಈ ಟೂರ್ನಿಯಲ್ಲಿ ಕೂಡ ಯಶ್ ಧೂಳ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
19 ವಯೋಮಿತಿ ವಿಶ್ವಕಪ್ ಟೂರ್ನಿ ಭಾರತ ಯುವ ತಂಡ
ಯಶ್ ಧೂಳ್ (ನಾಯಕ), ಎಸ್.ಕೆ. ರಶೀದ್ (ಉಪನಾಯಕ), ಹರ್ನೂರ್ ಸಿಂಗ್, ಅಂಗ್ಕ್ರಿಶ್ ರಘುವಂಶಿ, ನಿಶಾಂತ್ ಸಿಂಧೂ, ಸಿದ್ಧಾರ್ಥ್ ಯಾದವ್, ಅನ್ವೀಶ್ವರ್ ಗೌತಮ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಅಂಗಾಡ್ ಬಾವಾ, ಮನವ್ ಪರಾಖ್, ಕುಶಾಲ್ ತಂಬೆ, ಆರ್.ಎಸ್. ಹಂಗರ್ಕೆರ್, ವಾಸು ವಾಟ್ಸ್, ವಿಕ್ಕಿ ಒಸ್ಟಾ÷್ವಲ್, ರವಿಕುಮಾರ್, ಗರ್ವ್ ಸಂಗ್ವಾನ್