ವರ್ಷಾಂತ್ಯದಲ್ಲಿ ನಡೆಯಲಿರುವ T20I ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದ್ದು, ಇದರ ನಡುವೆ ಜಿಂಬಾಬ್ವೆ(Zimbabwe) ಮತ್ತು ನೆದರ್ಲೆಂಡ್ಸ್(Netherlands) ತಂಡಗಳು ಸಹ ಕಾಂಗರೂ ನಾಡಿನಲ್ಲಿ ನಡೆಯುವ ವಿಶ್ವ ಕ್ರಿಕೆಟ್ ಮಹಾಸಮರಕ್ಕೆ ಎಂಟ್ರಿಕೊಟ್ಟಿವೆ. ಇದರೊಂದಿಗೆ T20I ವಿಶ್ವಕಪ್ 2022ರಲ್ಲಿ ಪಾಲ್ಗೊಳ್ಳಲಿರುವ 16 ತಂಡಗಳ ನಿರ್ಧಾರವಾಗಿದೆ.
ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ICC ಪುರುಷರ T20 ವಿಶ್ವಕಪ್(ICC Men’s T20 World Cup) ಕ್ವಾಲಿಫೈಯರ್(Qualifier) B ಗ್ರೂಪ್ನಲ್ಲಿ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ತಂಡಗಳು ಅಜೇಯವಾಗಿವೆ. ಜುಲೈ 15ರಂದು, ಎರಡು ತಂಡಗಳು ತಮ್ಮ ಸೆಮಿ-ಫೈನಲ್ ಪಂದ್ಯಗಳನ್ನು ಗೆದ್ದು ಮೆಗಾ ಈವೆಂಟ್ಗೆ ಮುನ್ನಡೆಯನ್ನ ಪಡೆಯುವಲ್ಲಿ ಯಶಸ್ವಿಯಾಗಿವೆ. ಟಿ20 ವಿಶ್ವಕಪ್ ಟೂರ್ನಿಯ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ತಂಡವು, ಯುನೈಟೆಡ್ ಸ್ಟೇಟ್ಸ್, ಜರ್ಸಿ ಮತ್ತು ಸಿಂಗಾಪುರ ತಂಡಗಳು ಮಣಿಸಿ A ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಬಳಿಕ ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಪಪುವಾ ನ್ಯೂಗಿನಿಯಾ(Papua New Guinea) ತಂಡವನ್ನು ಜಿಂಬಾಬ್ವೆ 27 ರನ್ಗಳಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, 5 ವಿಕೆಟ್ಗೆ 199 ರನ್ಗಳ ಬೃಹತ್ ಸ್ಕೋರ್ ಕಲೆಹಾಕಿತು. ವೆಸ್ಲಿ ಮಾಧವೆರೆ 5 ಬೌಂಡರಿಗಳ ನೆರವಿನಿಂದ 42 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಊಳಿದಂತೆ ಇತರ ಬ್ಯಾಟ್ಸ್ಮನ್ಗಳು ಅಲ್ಪಮೊತ್ತದ ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿಯತ್ತ ಕೊಂಡೊಯ್ದರು. ಆದರೆ ಈ ಟಾರ್ಗೆಟ್ ಚೇಸ್ ಮಾಡಿದ PNG ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 172 ರನ್ಗಳಿಸಲಷ್ಟೇ ಶಕ್ತವಾಯಿತು. PNG ಪರ ಟೋನಿ ಉರಾ PNG ಪರ 66(35) ರನ್ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಬುಲವಾಯೊ ಅಥ್ಲೆಟಿಕ್ ಕ್ಲಬ್ನಲ್ಲಿ ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ 7 ವಿಕೆಟ್ಗಳಿಂದ USA ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ USA 19.4 ಓವರ್ಗಳಲ್ಲಿ 138 ರನ್ಗಳಿಗೆ ಆಲೌಟ್ ಆಯಿತು. ಡಚ್ ತಂಡದ ಪರ ಬಾಸ್ ಡಿ ಲೀಡೆ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ ಎರಡು ವಿಕೆಟ್ ಪಡೆದರು. ಈ ಟಾರ್ಗೆಟ್ ಬೆನ್ನತ್ತಿದ ನೆದರ್ಲೆಂಡ್ಸ್, 19 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಜಯಭೇರಿ ಬಾರಿಸಿತು. ನೆದರ್ಲೆಂಡ್ಸ್ ಪರ ಡಿಲೇಡೆ, 91*(67) ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
T20I World Cup : ಕ್ವಾಲಿಫೈಯರ್ನಲ್ಲಿ ಮಿಂಚಿದ ಜಿಂಬಾಬ್ವೆ