ಸಹಾ ಟಾಪ್ ಕ್ಲಾಸ್ ವಿಕೆಟ್ ಕೀಪರ್… ಆದ್ರೆ ಧೋನಿ wicketkeeper sportskarnataka
ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಅತ್ಯುತ್ತಮ ವಿಕೆಟ್ ಕೀಪರ್ ಗಳು ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂದಿದ್ದಾರೆ. ಅಲ್ಲದೇ ಈ ಮೂವರು ವಿಕೆಟ್ ಗಳ ಹಿಂದೆ ಪಾದರಸದಂತೆ ವ್ಯವಹಿಹರಿಸುತ್ತಾರೆ, ಈ ಮೂವರು ಅದ್ಭುತವಾದ ವಿಕೆಟ್ ಕೀಪರ್ ಗಳು, ಇವರಲ್ಲಿ ಧೋನಿ ಬೆಸ್ಟ್ ಎಂದಿದ್ದಾರೆ.
ಟೀಂ ಇಂಡಿಯಾದ ಬೆಸ್ಟ್ ವಿಕೆಟ್ ಕೀಪರ್ ಗಳ ಬಗ್ಗೆ ಯುಟ್ಯೂಬ್ ಚಾನಲ್ ನಲ್ಲಿ ಮಾತನಾಡಿರುವ ಅಶ್ವಿನ್, ಧೋನಿ, ಕಾರ್ತಿಕ್, ವೃದ್ಧಿಮಾನ್ ಸಹಾ ಟೀಂ ಇಂಡಿಯಾದ ಬೆಸ್ಟ್ ಕೀಪರ್ ಗಳು, ಇವರ ಪೈಕಿ ಧೋನಿ ದಿ ಬೆಸ್ಟ್. ಧೋನಿ ಕಷ್ಟಕರವಾದ ಸ್ಪಿನ್ ಎಸೆತಗಳನ್ನು ಸುಲಭವಾಗಿ ಹಿಡಿಯುತ್ತಾರೆ. ವಿಕೆಟ್ ಗಳ ಸುತ್ತಮುತ್ತ ಮಿಂಚಿನಂತೆ ಓಡಾಡುತ್ತಾರೆ ಎಂದು ಅಶ್ವಿನ್ ಹೇಳಿದ್ದಾರೆ. ವೃದ್ಧಿಮಾನ್ ಸಹಾ ಧೋನಿಯಂತೆ ಪಾದರಸದಂತೆ ಇರುತ್ತಾರೆ. ಸಹಾ ವಿಕೆಟ್ ಕೀಪಿಂಗ್ ಟಾಪ್ ಕ್ಲಾಸ್ ಎಂದಿದ್ದಾರೆ.
ಇನ್ನು ಅಶ್ವಿನ್ ಅವರ ಪ್ರಕಾರ ಭಾರತದ ಬೆಸ್ಟ್ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಈಗಿನ ರಿಷಬ್ ಪಂತ್ ಕೂಡ ಸ್ಥಾನ ಪಡೆದಿದ್ದಾರೆ.
ಎಂ.ಎಸ್.ಧೋನಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 829 ಮಂದಿಯನ್ನು ಬಲಿ ಪಡೆದಿದ್ದಾರೆ.195 ಸ್ಟಂಪ್ ಔಟ್ ಮಾಡಿದ್ದಾರೆ. ಐಪಿಎಲ್ ನಲ್ಲಿ 152 ಮಂದಿಗೆ ಖೆಡ್ಡಾ ತೋಡಿದ್ದರೇ ಟಿ 20 ಕ್ರಿಕೆಟ್ ನಲ್ಲಿ 268 ಮಂದಿಗೆ ಪೆವಿಲಿಯನ್ ತೋರಿಸಿದ್ದಾರೆ