ಇಂಗ್ಲೆಂಡ್ ನಾಯಕನಿಗೆ ಪಾಂಟಿಂಗ್ ಕ್ಯಾಪ್ಟನ್ಸಿ ಪಾಠ Ponting sports karnataka
ಆಶಸ್ ಸರಣಿಯಲ್ಲಿ ನಡೆದಿರುವ ಎರಡು ಟೆಸ್ಟ್ ಪಂದ್ಯಗಳನ್ನ ಸೋತಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕ್ಯಾಪ್ಟನ್ಸಿ ಪಾಠ ಮಾಡಿದ್ದಾರೆ.
ಅಡಿಲೇಡ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 272 ರನ್ ಗಳಿಂದ ಸೋಲುಂಡಿದೆ.
ಆ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋಲು ಸಂಕಷ್ಟದಲ್ಲಿದೆ. ಇತ್ತ ಆಸ್ಟ್ರೇಲಿಯಾದ ತಂಡ 5 ಮ್ಯಾಚ್ ಗಳ ಸರಣಿಯಲ್ಲಿ 2.0 ಅಂತರದೊಂದಿಗೆ ಮುನ್ನಡೆ ಸಾಧಿಸಿದೆ.
ಇನ್ನು ಎರಡನೇ ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ್ದ ಜೋ ರೂಟ್. ನಮ್ಮ ಬೌಲರ್ ಗಳು ಸರಿಯಾದ ಲೈನ್ ಅಂಡ್ ಲೆಂತ್ ನಲ್ಲಿ ಬೌಲಿಂಗ್ ಮಾಡಲಿಲ್ಲ.
ಹೀಗಾಗಿ ನಾವು ಹಿನ್ನಡೆ ಅನುಭವಿಸಿದ್ದೇವೆ ಎಂದರು. ಇದಕ್ಕೆ ಉತ್ತರವಾಗಿ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದು, ರೂಟ್ ಗೆ ಕ್ಯಾಪ್ಟನ್ಸಿ ಕ್ಲಾಸ್ ಪಡೆದುಕೊಂಡಿದ್ದಾರೆ.
ರೂಟ್ ಮಾತುಗಳಿಂದ ನಾನು ಶಾಕ್ ಗೆ ಒಳಗಾಗಿದ್ದೇನೆ. ಬೌಲರ್ ಗಳನ್ನ ಬದಲಿಸಬೇಕಾಗಿರುವುದು ಯಾರು..? ನೀನು ಕ್ಯಾಪ್ಟನ್ ಆಗಿದ್ದು ಮೈದಾನದಲ್ಲಿ ಏನ್ ಮಾಡ್ತಿದ್ದೀಯಾ..?
ನಿನ್ನ ಮಾತಿಗೆ ತಕ್ಕಂಥೆ ಬೌಲಿಂಗ್ ಮಾಡುತ್ತಿಲ್ಲ ಅಂದ್ರೆ ಬೌಲರ್ ಗಳನ್ನ ಬದಲಾವಣೆ ಮಾಡಬೇಕು.
ನಿನ್ನ ವ್ಯೂಹವನ್ನ ಜಾರಿ ಮಾಡುವಂತಹ ಬೌಲರ್ ಗಳನ್ನ ಮೈದಾನಕ್ಕೆ ಇಳಿಸಬೇಕು. ಬೌಲರ್ ಗಳ ಜೊತೆ ಮೊದಲು ಮುಕ್ತವಾಗಿ ಮಾತನಾಡಬೇಕು. ಅದು ಕ್ಯಾಪ್ಟನ್ಸಿ ಅಂದರೇ ಎಂದು ರಿಕಿ ಕ್ಲಾಸ್ ತೆಗೆದುಕೊಂಡಿದ್ದಾರೆ.