ಐಪಿಎಲ್ ನಲ್ಲಿ ಆ ತಂಡದ ಪರ ಆಡಬೇಕು : ಅಶ್ವಿನ್
ಐಪಿಎಲ್-2022ಕ್ಕೆ ಸಂಬಂಧಿಸಿದಂತೆ ಮೆಗಾ ಹರಾಜು ಜನವರಿಯಲ್ಲಿ ಆಗಲಿದೆ. ಈಗಾಗಲೇ ಆಯಾ ಫ್ರಾಂಚೈಸಿಗಳು ರಿಟೈನ್ಡ್ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಬರುವ ಸೀಸನ್ನಲ್ಲಿ ಹೊಸ ತಂಡಗಳಾದ ಲಕ್ನೋ, ಅಹ್ಮದಾಬಾದ್ ಅಖಾಡಕ್ಕೆ ಇಳಿಯಲಿವೆ. ಇನ್ನು ಎರಡು ಫ್ರಾಂಚೈಸಿಗಳು ಡಿಸೆಂಬರ್ 25 ರ ಒಳಗೆ ತಮಗೆ ಬೇಕಾದ ನಾನ್ ರಿಟೈನ್ಡ್ ಆಟಗಾರರಲ್ಲಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು. ಈ ಬಾರಿ ಹಲವು ಸ್ಟಾರ್ ಆಟಗಾರರು ಹರಾಜಿಗೆ ಬರಲಿದ್ದಾರೆ. ಅದೇ ರೀತಿ ಅಶ್ವಿನ್ ಕೂಡ ಹರಾಜಿಗೆ ಬರಲಿದ್ದು, ಈ ಬಗ್ಗೆ ಮನ ಬಿಚ್ಚಿ ಮಾತನಾಡಿಲಿದ್ದಾರೆ.
ಮುಂಬರುವ ಸೀಸನ್ ನಲ್ಲಿ ಮತ್ತೆ ಚೆನ್ನೈ ತಂಡದ ಪರ ಆಡಬೇಕೆಂದು ಅಶ್ವಿನ್ ಹೇಳಿದ್ದಾರೆ. ಅಶ್ವಿನ್ ತನ್ನ ಐಪಿಎಲ್ ಕೇರಿರ್ ನಲ್ಲಿ 8 ಸೀಸನ್ಗಳಲ್ಲಿ ಚೆನ್ನೈಸೂಪರ್ ಕಿಂಗ್ಸ್ಗೆ ಪ್ರಾಧಾನ್ಯ ವಹಿಸಿದ್ದಾರೆ.
“ಸಿಎಸ್ಕೆ ನನಗೆ ತುಂಬಾ ಹತ್ತಿರವಾದ ಫ್ರಾಂಚೈಜಿ, ಎಸ್ಎಸ್ಕೆ ನನಗೆ ಒಂದು ಸ್ಕೂಲ್ನಂತಹದ್ದು. ಅಲ್ಲಿ ನಾನು ಪ್ರೀ ಕೆಜಿ, ಎಲ್ಕೆಜಿ, ಯುಕೆಜಿ, ಪ್ರೈಮರೀ ಓದಿದ್ದೇನೆ. ನಂತರ ಹೈಸ್ಕೂಲ್ ಶಿಕ್ಷಣವನ್ನು ಸಹ ಅಲ್ಲೇ ಪ್ರಾರಂಭಿಸಿ, 10 ತರಗತಿಯ ಪರೀಕ್ಷೆಗಳನ್ನು ಮುಗಿಸಿ, ನಾನು ಬೇರೆ ತರಗತಿಗಳಿಗೆ ಹೋದೆ. ನಾನು ನನ್ನ 11,12 ತರಗತಿಗಳನ್ನು ಬೇರೆ ಕಡೆ ಮಾಡಿದ್ದೇನೆ. ಆದರೆ ಎಲ್ಲವನ್ನೂ ಪೂರ್ಣಗೊಳಿಸಿದ ನಂತರ, ಖಂಡಿತವಾಗಿಯೂ ಯಾರಾದರೂ ಮನೆಗೆ ಬರಬೇಕು? ಹೀಗಗಿ ನಾನು ನನ್ನ ಸ್ವಂತ ಮನೆಗೆ( ಸಿಎಸ್ ಕೆ) ವಾಪಸ್ ಹೋಗುದಕ್ಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಅಶ್ವಿನ್ ಚೆನ್ನೈ ತಂಡದ ಪರ 94 ಪಂದ್ಯಗಳಲ್ಲಿ 24.2 ಸರಾಸರಿಯೊಂದಿಗೆ 90 ವಿಕೆಟ್ಗಳನ್ನು ಗಳಿಸಿದ್ದಾರೆ.