ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಮತ್ತು ಯೋಗೇಶ್ವರ್ ದತ್ ನಡುವೆ ಮಾತಿನ ಸಮರ ನಡೆದಿದೆ.
ಅಗ್ರ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕುಸ್ತಿಪಟು ಯೋಗೇಶ್ವರ್ ಅವರನ್ನು ಕುಸ್ತಿ ಫೆಡರೇಶನ್ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಗುಲಾಮ ಎಂದು ಟೀಕಿಸಿದ್ದಾರೆ.
ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ ಟ್ರಯಲ್ಸ್ಗೆ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ವಿನಾಯಿತಿ ನೀಡಿತ್ತು. ಇದನ್ನು ಕುಸ್ತಿಪಟು ಯೋಗೇಶರ್ ಪ್ರಶ್ನಿಸಿ ಕುಸ್ತಿಪಟುಗಳನ್ನು ಟೀಕಿಸಿದ್ದರು.
ಕುಸ್ತಿ ಫೆಡರೇಶನ್ನ ನಿರ್ಗಮಿತ ಅಧ್ಯಯಕ್ಷ ಬ್ರಿಜ್ ಭೂಷಣ್ ವಿರುದ್ಧ ವಿಚಾರಣೆ ನಡೆಯುವಾಗ ಮಹಿಳಾ ಕುಸ್ತಿಪಟುವೊಬ್ಬರು ಈ ವಿಚಾರ ಹೇಳಿದಾಗ ಯೋಗೇಶ್ವರ್ ನಕ್ಕಿದ್ದರು ಮತ್ತು ಇಂಥ ಘಟನೆಗಳು ನಡೆಯುತ್ತಾ ಎಂದು ಪ್ರಶ್ನಿಸಿದ್ದರು ಎಂದು ವಿನೇಶ್ ಪೋಗಟ್ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ಕೇಂದ್ರ ಕ್ರೀಡಾ ಸಚಿವಾಲಯ ಆರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯಲ್ಲಿ ಕುಸ್ತಿಪಟು ಯೋಗೇಶ್ವರ್ ಕೂಡ ಸದಸ್ಯರಾಗಿದ್ದರು. ತನಿಖಾ ವರದಿಯನ್ನು ಸರ್ಕಾರ ಬಹಿರಂಗಗೊಳಿಸಲಿಲ್ಲ.
ಲಂಡನ್ ಒಲಿಂಪಿಕ್ ಪದಕ ವಿಜೇತರಾಗಿರುವ ಯೋಗೇಶ್ವರ್ ದತ್, ಕುಸ್ತಿಪಟುಗಳಿಗೆ ನೀಡಿರುವ ವಿನಾಯಿತಿ ನೀಡಿರುವ ಹಿಂದಿನ ತರ್ಕ ಮತ್ತು ಮಾನದಂಡವನ್ನು ವಿಡಿಯೋ ಮೂಲಕ ಯೋಗೇಶ್ವರ್ ಟ್ವೀಟರ್ನಲ್ಲಿ ಪ್ರಶ್ನಿಸಿದ್ದರು.
ಎರಡು ಗಂಟೆಗಳ ಬಳಿಕ ವಿನೇಶ್ ಫೋಗಟ್ ಉದ್ದದ ಸಾಲುಗಳೊಂದಿಗೆ ತಿರುಗೇಟು ನೀಡಿದರು.
ಬ್ರಿಜ್ ಭೂಷಣ್ ತಟ್ಟೆಯಲ್ಲಿ ಬಿಟ್ಟ ಊಟವನ್ನು ಕುಸ್ತಿಪಟು ಯೋಗೇಶ್ವರ್ ತಿನ್ನುತ್ತಿದ್ದ ಅನ್ನೋದು ಇಡೀ ಕುಸ್ತಿ ಜಗತ್ತಿಗೆ ಗೊತ್ತಿದೆ. ಈ ಸಮಾಜದಲ್ಲಿ ಯಾರಾದರೂ ಅನ್ಯಾಯದ ವಿರುದ್ಧ ಭವಾನಿ ಎತ್ತಿದರೆ ಆಗ ಯೋಗೇಶ್ವರ್ ವಾಂತಿ ಮಾಡಿಕೊಳ್ಳ್ತುತಾನೆ ಎಂದು ವಿನೇಶ್ ಟ್ವೀಟರ್ ಪೇಜ್ನಲ್ಲಿ ಬರೆದಿದ್ದಾರೆ.
ಬ್ರಿಜ್ ಭೂಷಣ್ ಅವರ ಕಾಲನ್ನು ನೀನು ನೆಕ್ಕಿದ್ದನ್ನು ಕುಸ್ತಿ ಜಗತ್ತು ಯಾವಗಲೂ ನೆನಪಿಟ್ಟುಕೊಂಡಿರುತ್ತದೆ ಎಂದು ವಿನೇಶ್ ತಿರುಗೇಟು ನೀಡಿದ್ದಾರೆ.
ಜೈಚಂದ್ನಂತೆ ಯೋಗೇಶ್ವರ್ ಕುಸ್ತಿಯಲ್ಲಿರುವವರೆಗೆ ಪೀಡಕರು ಇದ್ದೆ ಇರುತ್ತಾರೆ ಎಂದು ವಿನೇಶ್ ಫೋಗಟ್ ಇತಿಹಾಸಕ್ಕೆ ಹೋಲಿಸಿದ್ದಾರೆ.
ಕೆಟ್ಟದಾಗಿ ನಗುತ್ತಿದ್ದ ಯೋಗೇಶ್ವರ್ ದತ್
ವಿಚರಣೆ ವೇಳೆ ತನಿಖಾ ಸದಸ್ಯನಾಗಿದ್ದ ಯೋಗೇಶ್ವರ್ಮಹಿಳಾ ಕುಸ್ತಿಪಟುಗಳ ದೂರನ್ನು ಹಳ್ಳಹಿಡಿಯುವಂತೆ ಮಾಡಲು ಪ್ರಯತ್ನಿಸಿದ್ದರು ಎಂದು ವಿನೇಶ್ ಫೋಗಟ್ ನೆನಪಿಸಿಕೊಂಡಿದ್ದಾರೆ. ಮಹಿಳಾ ಕುಸ್ತಿಪಟುಗಳು ತಮಗೆ ಆದ ಕೆಟ್ಟ ಅನುಭವವನ್ನು ಹೇಳುತ್ತಿದ್ದರೆ ಯೋಗೇಶ್ವರ್ ದತ್ ಕೆಟ್ಟದಾಗಿ ನಗುತ್ತಿದ್ದರು ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.