ನಾಯಕ ಸುನಿಲ್ ಚೆಟ್ರಿ ಅವರ ಅಮೋಘ ಆಟದ ಪ್ರದರ್ಶನ ನೆರವಿನಿಂದ ಭಾರತ ಫುಟ್ಬಾಲ್ ತಂಡ ನೇಪಾಳ ವಿರುದ್ಧ 2-0 ಗೋಲುಗಳಿಂದ ಗೆಲುವು ಕಂಡಿದೆ. ಇದರೊಂದಿಗೆ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿದೆ.
ಚೆಟ್ರಿ (61ನೇ ನಿಮಿಷ) ಟೂರ್ನಿಯಲ್ಲಿ ನಾಲ್ಕೆನೆ ಗೋಲು ಹೊಡೆದರು. ಮಹೇಶ್ ಸಿಂಗ್ (70ನೇ ನಿಮಿಷ)ಗೋಲು ಹೊಡೆದರು. ಭಾರತ ಸತತ ಎರಡನೆ ಗೆಲುವು ದಾಖಲಿಸಿತು.
ಮೊನ್ನೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4-0 ಗೋಲುಗಳಿಂದ ಗೆದ್ದುಕೊಂಡಿತ್ತು.
ಎರಡು ಗೆಲುವುಗಳಿಂದ 6 ಅಂಕ ಪಡೆದ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಎ ಗುಂಪಿನಿಂದ ಭಾರತ ತಂಡ ಕುವೈತ್ ಜತೆ ಸೆಮಿಗೆ ಅರ್ಹತೆ ಪಡೆದಿದೆ.
ಜೂ.27ರಂದು ಭಾರತ ತಂಡ ನಿರ್ಣಾಯಕ ಪಂದ್ಯದಲ್ಲಿ ಕುವೈತ್ ವಿರುದ್ಧ ಹೋರಾಡಲಿದೆ. ನೇಪಾಳ ಮತ್ತು ಪಾಕಿಸ್ತಾನ ಎರಡೂ ಪಂದ್ಯಗಳನ್ನು ಸೋತಿದ್ದರಿಂದ ಸೆಮಿಗೆ ಅರ್ಹತೆ ಪಡೆಯಲು ಪರದಾಡುತ್ತಿದೆ.
ಮೊದಲಾರ್ಧದ ಅವಧಿಯಲ್ಲಿ ನೇಪಾಳ ತೀವ್ರ ಪೈಪೋಟಿ ನೀಡಿದ್ದರಿಂದ ಗೋಲು ದಾಖಲಾಗಲಿಲ್ಲ. ಸಾಕಷ್ಟು ಬದಲಾವಣೆಗಳೊಂದಿಗೆ ಭಾರತ ಕಣಕ್ಕಿಳಿದಿತ್ತು.
ಮೊದಲ ಅವಧಿಯಲ್ಲಿ ನೇಪಾಳ ಅದ್ಭುತ ರಕ್ಷಣಾತ್ಮಕ ಆಟ ಮತ್ತು ಸಾಂಘಿಕ ದಾಳಿಯಿಂದ ಗಮನ ಸೆಳೆಯಿತು. 21 ಮತ್ತು 34ನೇ ನಿಮಿಷಗಳಲ್ಲಿ ನೇಪಾಳ ಗೋಲು ಹೊಡೆಯಲು ಪ್ರಯತ್ನಿಸ್ತಿತಾದರೂ ಯಶಸ್ಸು ಕಾಣಲಿಲ್ಲ.
ಎರಡನೆ ಅವಯಲ್ಲಿ ಭಾರತ ವೇಗವಾಗಿ ಆಡಿತು. ಇದರ ಫಲವಾಗಿ 61ನೇ ನಿಮಿಷದಲ್ಲಿ
ಸಾಹಲ್ ಮತ್ತು ಮಹೇಶ್ ನೆರವಿನಿಂದ ಸುನಿಲ್ ಚೆಟ್ರಿ ಗೋಲು ಹೊಡೆಯುವಲ್ಲಿ ಯಶಸ್ಸು ಕಂಡರು.
ಮಹೇಶ್ ಸಿಂಗ್ ಹೆಡ್ಡರ್ ಸಹಾಯದಿಂದ 70ನೇ ನಿಮಿಷದಲ್ಲಿ ಗೋಲು ಹೊಡೆದು 2-0 ಮುನ್ನಡೆ ನೀಡಿದರು.
ನೇಪಾಳ ತಂಡ ಮರು ಹೋರಾಟ ನೀಡಿ ಗೋಲು ಹೊಡೆಯಲು ಪ್ರಯತ್ನಿಸಿತು. ಆದರೆ ಭಾರತ ಎದುರಾಳಿ ತಂತ್ರವನ್ನು ವಿಫಲಗೊಳಿಸಿತು.
ಚೆಟ್ರಿ2ನೇ ಏಷ್ಯಾ ಆಟಗಾರ
ನಾಯಕ ಸುನಿಲ್ ಚೆಟ್ರಿ (91 ಗೋಲು, 139 ಪಂದ್ಯ) ಅತಿ ಹೆಚ್ಚು ಗೋಲು ಹೊಡೆದು ಎರಡನೆ ಏಷ್ಯಾ ಆಟಗಾರ ಎನಿಸಿದ್ದಾರೆ. ಇರಾನ್ನ ಅಲಿ ಡಾಯಿ (109 ಗೋಲು 148 ಪಂದ್ಯ) ಅತಿ ಹೆಚ್ಚು ಗೋಲು ವಿಶ್ವದ ಸಕ್ರಿಯವಾಗಿರುವ ಮೂರನೆ ಆಟಗಾರ ಎನಿಸಿದ್ದಾರೆ.