ರೆಸ್ಲಿಂಗ್ ಫೆಡರೇಶನ ಮಾಜಿ ಅಧ್ಯಯಕ್ಷ ಬ್ರಿಜ್ `ಭೂಷಣ್ ಅವರ ಸವಾಲನ್ನು ಸ್ವೀಕರಿಸಿದ್ದು ಮಂಪರು ಪರೀಕ್ಷೆಗೆ ಸಿದ್ಧವಿರುವುದಾಗಿ ತಾರಾ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
ಫೆಡರೇಶನ ಮಾಜಿ ಅಧ್ಯಯಕ್ಷ ಬ್ರಿಜ್ ಭೂಷಣ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮ ಮುಗ್ದತೆಯನ್ನು ಸಾಬೀತುಪಡಿಸಲು ಸಿದ್ಧರಿದ್ದು ಮಂಪರು ಅಥವಾ ಪೊಲಿಗ್ರಾಮ್ ಪರೀಕ್ಷೆ ಒಳಪಡುತ್ತೇನೆ ಎಂದರು. ನಾನು ಮಂಪರು ಪರೀಕ್ಷೆಗೆ ಸಿದ್ಧನಿದ್ದೇನೆ. ನನ್ನ ಒಂದು ಷರತ್ತು ಏನೆಂದರೆ ವಿನೀಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ನನ್ನೊಂದಿಗೆ ಈ ಪರೀಕ್ಷೆಗೆ ಒಳಪಡಬೇಕೆಂದರು.
ಈ ಇಬ್ಬರು ಕುಸ್ತಿಪಟುಗಳು ಒಪ್ಪಿದೆರೆ ಪ್ರತಿಕಾಗೋಷ್ಠಿ ಕರೆದು ಘೋಷಿಸಲು, ನಾನು ಆಣೆ ಮಾಡುತ್ತಿದ್ದು ಈ ಪರೀಕ್ಷೆಗೆ ಸಿದ್ಧವಿರುವುದಾಗಿ ಬ್ರಿಜ್ ಭೂಷಣ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕುಸ್ತಿಪಟು ಬಜರಂಗ್ ಪುನಿಯಾ, ನಾವು ಕೂಡ ಮಂಪರು ಪರೀಕ್ಷೆಗೆ ಸಿದ್ಧರಿದ್ದೇವೆ. ಸುಪ್ರೀಮ್ ಕೋರ್ಟ್ ಸುಪರ್ದಿಯಲ್ಲಿ ಹಾಗೂ ರಾಷ್ಟ್ರೀಯ ಚಾನೆಲ್ಗಳ ನೆರ ಪ್ರಸಾರದಲ್ಲಿ ಬ್ರಿಜ್ ಭೂಷಣ್ ನಮ್ಮೊಂದಿಗೆ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸವಾಲು ಹಾಕಿದರು.
ನಾವಿಬ್ಬರು ಮಾತ್ರವಲ್ಲ ದೂರು ಕೊಟ್ಟಿರುವ ಹುಡುಗಿಯರು ಸಹ ಮಂಪರು ಪರೀಕ್ಷೆ ಒಳಪಡಲಿ ಎಂದು ಬಜರಂಗ್ ಹೇಳಿದ್ದಾರೆ.
ಈ ಪರೀಕ್ಷೆ ಮೂಲಕ ಇಡೀ ದೇಶ ನಾವೆಷ್ಟು ಕಷ್ಟ ಅನುಭವಿಸಿದೆ ಅನ್ನೋದನ್ನು ನೋಡಲಿ ಎಂದು ವಿನೀಶ್ ಪೋಗಟ್ ಹೇಳಿದ್ದಾರೆ.
ಇಂದು ಇಂಡಿಯಾ ಗೇಟ್ ಬಳಿ ಕ್ಯಾಂಡಲ್ ಹಚ್ಚಿ ಶಾಂತಿಯುತವಾಗಿ ಪ್ರತಿಭಟಿಸುವುದಾಗಿ ಕುಸ್ತಿಪಟುಗಳು ತಿಳಿಸಿದ್ದಾರೆ.