ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ನೀತು ಗಂಗಾಸ್ (48ಕೆ,ಜಿ) ವಿಶ್ವಚಾಂಪಿಯನ್ನ್ನಾಗಿ ಹೊರಹೊಮ್ಮಿದ್ದಾರೆ. ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನವಾಗಿದೆ.
ಶನಿವಾರ ನಡೆದ ಮಹಿಳೆಯರ 48ಕೆಜಿ ವಿಭಾಗದ ಫೈನಲ್ನಲ್ಲಿ ನೀತು ಗಂಗಾಸ್ ಮಂಗೋಲಿಯಾದ ಲೂತಾಸಾಯಿಖಾನ್ ಅಲ್ತಾನಟೆಸೆಟ್ಸೆಗ್ ವಿರುದ್ಧ 5-0 ಅಂಕಗಳಿಂದ ಅವಿರೋಧವಾಗಿ ಗೆದ್ದುಕೊಂಡರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿಗೆ ಫೈನಲ್ ಆಡಿದ ನೀತು ಗಂಗಾಸ್ ಆರಂಭದಲ್ಲೆ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲೆ ಪ್ರಾಬಲ್ಯ ಮೆರೆದ ನೀತು ಮಂಗೋಲಿಯಾ ಬಾಕ್ಸರ್ಗೆ ಪ್ರತಿರೋಧಕ್ಕೆ ಅವಕಾಶ ಕೊಡಲಿಲ್ಲ.
ಲೂತಾಸಾಯಿಖಾನ್ ಕೆಲವು ಪಂಚ್ ಕೊಡುವಲ್ಲಿ ವಿಫಲರಾದರು. ಆಕ್ರಮಣಕಾರಿ ಆಟವಾಡಿದ ನೀತು ಎರಡು ಸುತ್ತಿನ ನಂತರ ಮುನ್ನಡೆ ಸಾಧಿಸಿದರು.
ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಕೊರಿಯಾದ ಕಾಂಗ್ ಡೊಯಿಯೊನ್ ವಿರುದ್ಧ ಆಡುವ ಮೂಲಕ ಶುಭಾರಂಭ ಮಾಡಿದ ನೀತು ನಂತರ ತಜಕಿಸ್ತಾನದ ಕೊಸಿಮೊವಾ ಸುಮಾಯಿಯಾ ವಿರುದ್ಧ ಗೆದ್ದು ಬೀಗಿದರು.
ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ವಾಡಾ ಮಾಡೊಕಾ ವಿರುದ್ಧ ಗೆಲುವು, ಸೆಮಿಫೈನಲ್ನಲ್ಲಿ ಕಜಕಿಸ್ತಾನದ ಅಲುಹಾ ಬೆಲಿಕಿಬೆಕೊವಾ ವಿರುದ್ಧ ಗೆದ್ದು ಫೈನಲ್ ತಲುಪಿದ್ದರು.
ಇಂದು ಮತ್ತೊಂದು ವಿಭಾಗದ ಫೈನಲ್ಸ್ನಲ್ಲಿ ಸ್ವೀಟಿ ಬೂರಾ ಚೀನಾದ ಲಿನಾ ವಾಮಗ್ ವಿರುದ್ಧ ಸೆಣಸಲಿದ್ದಾರೆ. ನಿಖಾತ್ ಜರೀನ್ ಮತ್ತು ಲವ್ಲಿನಾ ಬೋರಾಗೈನ್ ಫೈನಲ್ನಲ್ಲಿ ಸೆಣಸಲಿದ್ದಾರೆ.