ಭಾರತದ ತಾರಾ ಜೋಡಿಯಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸ್ವಿಸ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಸಾತ್ವಿಕ್ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಎದುರಾಳಿ ಜೆಪ್ಪೆ ಬೇ ಹಾಗೂ ಲಾಸ್ಸೆ ಮೊಲ್ದೆ ವಿರುದ್ಧ 84 ನಿಮಿಷಗಳ ಕಾಲ ಕಠಿಣ ಹೋರಾಟ ನೀಡಿ 15-21, 21-11 ಅಂಕಗಳಿಂದ ಗೆದ್ದರು.
ಮೊದಲ ಸುತ್ತಿನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ 15-21 ಅಂಕಗಳ ಹಿನ್ನಡೆ ಅನುಭವಿಸಿತು.
ಎರಡನೆ ಸುತ್ತಿನಲ್ಲಿ ಭಾರತದ ಜೋಡಿ 11-4 ಮುನ್ನಡೆ ಪಡೆದು ನಂತರ 10 ಅಂಕಗಳನ್ನು ಸಂಪಾದಿಸಿ ಗೆದ್ದುಕೊಂಡಿತು. ನಿರ್ಣಾಯಕ ಮೂರನೆ ಸುತ್ತಿನಲ್ಲಿ ಸಾತ್ವಿಕ್ ಹಾಗೂ ಚಿರಾಗ್ 11-7 ಅಂಕಗಳ ಮುನ್ನಡೆ ಪಡೆಯಿತು. 7 ಅಂಕಗಳ ಮುನ್ನಡೆಯೊಂದಿಗೆ ಸೆಮಿಗೆ ಪ್ರವೇಶ ಪಡೆದರು.
ಸೆಮಿಫೈನಲ್ನಲ್ಲಿ ಭಾರತದ ಜೋಡಿ ಮಲೇಷ್ಯಾದ ಒಂಗ್ ಯೆವ್ ಸಿನ್ ಹಾಗೂ ಟಿಯೊ ಏ ಯೀ ವಿರುದ್ಧ ಸೆಣಸಲಿದ್ದಾರೆ.
ಪಿ.ವಿ.ಸಿಂಧು ಹಾಗೂ ಲಕ್ಷ್ಯಸೇನ್ ಟೂರ್ನಿಯಿಂದ ನಿರ್ಗಮಿಸಿರುವುದರಿಂದ ಸಾತ್ವಿಕ್, ಚಿರಾಗ್ ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಜೋಡಿಯಾಗಿದೆ.