World Table Tennis Championships ಶರತ್ ಕಮಾಲ್ ಅಲಭ್ಯ.. ಭಾರತ ತಂಡ ಪ್ರಕಟ..!
ಚೀನಾದಲ್ಲಿ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಿಂದ ಭಾರತದ ಶರತ್ ಕಮಾಲ್ ಅವರು ಹೊರಗುಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಶರತ್ ಕಮಾಲ್ ಅವರು ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಸಾತಿಯನ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಶರತ್ ಕಮಾಲ್ ಅವರು ಭಾರತದ ಹಿರಿಯ ಆಟಗಾರ. ಅಲ್ಲದೆ ಕಳೆದ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೂರು ಪದಕಗಳನ್ನು ಗೆದ್ದುಕೊಂಡಿದ್ದರು.
ಶರತ್ ಕಮಾಲ್ ಅನುಪಸ್ಥಿತಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಆದ್ರೂ ಯುವ ಆಟಗಾರರಿಗೆ ಅವಕಾಶವೂ ಸಿಗಲಿದೆ. ಜಿ. ಸಾತಿಯನ್ ಅವರು ಭಾರತದ ಅಗ್ರಮಾನ್ಯ ಆಟಗಾರನಾಗಿದ್ದಾರೆ. ಅಲ್ಲದೆ ವಿಶ್ವದ ಶ್ರೇಯಾಂಕ ಪಟ್ಟಿಯಲ್ಲಿ 37ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ತಂಡದ ಉಸ್ತುವಾರಿಯನ್ನು ಮನಿಕಾ ಬಾತ್ರಾ ಅವರು ಮುನ್ನಡೆಸಲಿದ್ದಾರೆ. ಟೂರ್ನಿಯು ಸೆಪ್ಟಂಬರ್ 30ರಿಂದ ಅಕ್ಟೋಬರ್ 9ರವರೆಗೆ ನಡೆಯಲಿದೆ.
ಪುರುಷ ತಂಡ ಹೀಗಿದೆ..
ಜಿ. ಸಾತಿಯನ್, ಸನೀಲ್ ಶೆಟ್ಟಿ, ಹರ್ಮಿತ್ ದೇಸಾಯಿ, ಮನುಶ್ ಶಾಹ್, ಮನವ್ ಥಕ್ಕರ್.
ಮಹಿಳಾ ತಂಡ – ಮನಿಕಾ ಬಾತ್ರಾ, ಶ್ರೀಜಾ ಅಕುಲಾ, ರೀತತ್ ರಿಷ್ಯಾ, ದಿಯಾ ಚಿತಾಲೆ, ಸ್ವಸ್ತಿಕಾ ಘೋಷ್.
ಕೋಚ್‍ಗಳು – ಎಸ್. ರಮನ್, ಆನಿಂದಿತಾ ಚಕ್ರವರ್ತಿ, ಕ್ರಿಸ್ ಆಡ್ರಿಯನ್