Rohit Sharma – t-20 cricket – ಗರಿಷ್ಠ ರನ್ ಗಳಿಕೆಯ ಸರದಾರ

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆಯ ಸಾಧನೆಯೊಂದನ್ನು ಮಾಡಿದ್ದಾರೆ.
ಹೌದು, ಚುಟುಕು ಕ್ರಿಕೆಟ್ ನಲ್ಲಿ 3500 ದಾಖಲಿಸಿದ್ದ ವಿಶ್ವದ ಮೊದಲ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಪಾಕ್ ವಿರುದ್ಧ ರೋಚಕ ಜಯ ಸಾಧಿಸಿದ್ದ ನಂತರ ಹಾಂಕಾಂಗ್ ವಿರುದ್ಧ ಕೂಡ ಟೀಮ್ ಇಂಡಿಯಾ ಸುಲಭದ ಗೆಲುವನ್ನು ಸಾಧಿಸಿತ್ತು.
ಹಾಂಕಾಂಗ್ ವಿರುದ್ದ ಆಡುವುದಕ್ಕಿಂತ ಮುನ್ನವೇ ರೋಹಿತ್ ಶರ್ಮಾ ಈ ಸಾಧನೆಯನ್ನು ಮಾಡುವುದು ಖಚಿತವಾಗಿತ್ತು. ಯಾಕಂದ್ರೆ ಚುಟುಕು ಕ್ರಿಕೆಟ್ ನಲ್ಲಿ 3500 ರನ್ ದಾಖಲಿಸಲು ರೋಹಿತ್ ಗೆ ಬೇಕಾಗಿದ್ದು ಕೇವಲ ಒಂದು ರನ್ ಮಾತ್ರ. ಹಾರೂನ್ ಆರ್ಶದ್ ಅವರ ಮೊದಲ ಓವರ್ ನಲ್ಲಿ ಒಂದು ರನ್ ಗಳಿಸುವಾಗ ರೋಹಿತ್ ಶರ್ಮಾ ವಿಶ್ವ ಟಿ-20 ಕ್ರಿಕೆಟ್ ನಲ್ಲಿ 3500 ರನ್ ಗಳಿಸಿದ್ದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದರು.

ನ್ನು, 3497 ರನ್ ಗಳಿಸಿದ್ದ ನ್ಯೂಜಿಲೆಂಡ್ ನ ಆರಂಭಿಕ ಮಾರ್ಟಿನ್ ಗಪ್ಟಿಲ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 3399 ರನ್ ಗಳಿಸಿದ್ದಾರೆ.
2008ರಿಂದ ಎಲ್ಲಾ ಏಷ್ಯಾಕಪ್ ಟೂರ್ನಿಗಳನ್ನು ಆಡುತ್ತಿರುವ ರೋಹಿತ್ ಶರ್ಮಾ, 27 ಇನಿಂಗ್ಸ್ ಗಳಲ್ಲಿ 895 ರನ್ ಕೂಡ ಕಲೆ ಹಾಕಿದ್ದಾರೆ. ಅದು ಕೂಡ 40 ಸರಾಸರಿಯಲ್ಲಿ.
ಒಟ್ಟಿನಲ್ಲಿ ರೋಹಿತ್ ಶರ್ಮಾ ನಾಯಕನಾಗಿ, ಆಟಗಾರನಾಗಿ ಅದ್ಭುತವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಗೆಲ್ಲುವುದು ರೋಹಿತ್ ಶರ್ಮಾ ಅವರ ಪ್ರಮುಖ ಟಾರ್ಗೆಟ್ ಆಗಿದೆ. ಹಾಗೇ ಮುಂಬರುವ ವಿಶ್ವಕಪ್ ವೇಳೆ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ ನಲ್ಲಿ ನಾಲ್ಕು ಸಾವಿರ ರನ್ ಗಳಿಸಿದ್ದ ಹಿರಿಮೆಗೂ ಪಾತ್ರವಾಗಬಹುದು.