World Athletics Championship: ಫೈನಲ್ ಪ್ರವೇಶಿಸಿದ ಭಾರತದ Annu Rani
ಭಾರತದ ಜಾವೆಲಿನ್ ಎಸೆತಗಾರ್ತಿ ಅಣ್ಣು ರಾಣಿ ಎರಡನೇ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ತನ್ನ ಅಂತಿಮ ಪ್ರಯತ್ನದಲ್ಲಿ 59.60 ಮೀ ಜಾವೆಲಿನ್ ಎಸೆಯುವ ಮೂಲಕ ಅಣ್ಣು ಫೈನಲ್‌ಗೆ ಅರ್ಹತೆ ಪಡೆದರು.

ಅಣ್ಣು ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ಎರಡನೇ ಪ್ರಯತ್ನದಲ್ಲಿ 55.35 ಮೀಟರ್ ದೂರ ಎಸೆಯಲು ಶಕ್ತಳಾದರು. ನಂತರ ಕೊನೆಯ ಪ್ರಯತ್ನದಲ್ಲಿ 59.60ಮೀ ದೂರ ಎಸೆದು ಫೈನಲ್ ಗೆ ಲಗ್ಗೆ ಇಟ್ಟರು. ಅಣ್ಣು ಬಿ ಗುಂಪಿನ ಅರ್ಹತೆಯಲ್ಲಿ 59.60 ಮೀ ಎಸೆಯುವ ಮೂಲಕ ಐದನೇ ಸ್ಥಾನ ಪಡೆದರು. ಆದರೆ ಅವರು ಎರಡೂ ಗುಂಪುಗಳಲ್ಲಿ ಎಂಟನೇ ಸ್ಥಾನ ಪಡೆದರು. ಅಣ್ಣು ಅವರ ಅತ್ಯುತ್ತಮ ಸಾಧನೆ 63.82 ಮೀಟರ್ಸ್ ಆಗಿದೆ. ಆದರೆ, ಅರ್ಹತಾ ಸುತ್ತಿನಲ್ಲಿ 60 ಮೀಟರ್ ಎಸೆಯಲು ಸಾಧ್ಯವಾಗಿರಲಿಲ್ಲ. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸುವ ಮೂಲಕ ಪದಕ ಗೆಲ್ಲುವ ಅವಕಾಶವನ್ನು ಅಣ್ಣು ಹೊಂದಿದ್ದಾರೆ.

2019 ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಅಣ್ಣು ರಾಣಿ ಎಂಟನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು, ಆದರೆ ಪದಕದಿಂದ ವಂಚಿತರಾಗಿದ್ದರು.
ಮತ್ತೊಂದೆಡೆ, ಜಾವೆಲಿನ್‌ನಲ್ಲಿ ಟೋಕಿಯೊದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಶುಕ್ರವಾರ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ. ಅವರ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 5.35ಕ್ಕೆ ನಡೆಯಲಿದೆ. ನೀರಜ್ ಎ ಗುಂಪಿನಲ್ಲಿ ಸೇರಿದ್ದಾರೆ.
World Athletics Championships, Annu Rani, Final, Javelin Throw