Taipei Open: ಭರ್ಜರಿ ಗೆಲುವು ಸಾಧಿಸಿದ P Kashyap
ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪರುಪಳ್ಳಿ ಕಶ್ಯಪ್ ತೈಪೈ ಓಪನ್ ಬ್ಯಾಡ್ಮಿಂಟನ್ ವಿಭಾಗದ ಪುರುಷರ ಸಿಂಗಲ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಗುರುವಾರ ನಡೆದ ಕಶ್ಯಪ್ 21-10, 21-19ರಿಂದ ಆತಿಥೇಯ ದೇಶದ ಚಿಯಾ ಹಾವೋ ಲೀ ವಿರುದ್ಧ 36 ನಿಮಿಷಗಳ ಕಾದಾಟದಲ್ಲಿ ಭರ್ಜರಿ ಜಯ ಸಾಧಿಸಿದರು. ಮೊದಲ ಗೇಮ್ ನ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಕಶ್ಯಪ್, ಎರಡನೇ ಗೇಮ್ ನ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಅಲ್ಲದೆ ಮೊದಲಾರ್ಧದಲ್ಲಿ ಎದುರಾಳಿ ಆಟಗಾರನ ಕೈ ಮೇಲಾಯಿತು. ನಂತರ ಉತ್ತಮ ಸರ್ವ್ ಹಾಗೂ ಗ್ಯಾಪ್ ಶಾಟ್ ಗಳನ್ನು ಪ್ರಯೋಗಿಸಿ ಗಮನ ಸೆಳದರು. ಎರಡನೇ ಗೇಮ್ ನ ಒಂದು ಹಂತದಲ್ಲಿ 12-18ರಿಂದ ಹಿನ್ನಡೆ ಅನುಭವಿಸಿದ್ದರೂ, ನಂತರ ಸತತ ಅಂಕಗಳನ್ನು ಕಲೆ ಹಾಕಿ ಮಿಂಚಿದರು.

ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಪಿಯಾಂಶು ರಾಜವತ್ 19-21, 13-21 ರಿಂದ ಆತಿಥೇಯ ದೇಶದ ಚೆನ್ ಚಿ ತಿಂಗ್ ವಿರುದ್ಧ ನಿರಾಸೆ ಅನುಭವಿಸಿದರು. ಭಾರತದ ಯುವ ಆಟಗಾರ ಕಿರಣ್ ಜಾರ್ಜ್, ಮಿಥುನ್ ಮಂಜುನಾಥ್ ಆಘಾತ ಕಂಡರು.