ಭಾರತದ ಭರವಸೆಯ ಲಾಂಗ್ ಜಂಪರ್ (Long Jump) ಮುರಳಿ ಶ್ರೀಶಂಕರ್ (Murali Sreeshankar) World Athletics Championshipnನಲ್ಲಿ ಪದಕದ ಭರವಸ ಮೂಡಿಸಿದ್ದಾರೆ. ಪುರುಷರ ವಿಭಾಗದಲ್ಲಿ ಫೈನಲ್ ತಲುಪಿರುವ ಮುರಳಿ, ಭಾನುವಾರ ಭಾರತಕ್ಕೆ (India)ಶುಭ ಸುದ್ದಿ ತರುತ್ತಾರೆ ಅನ್ನುವ ನಿರೀಕ್ಷೆಇದೆ.
ಭಾರತದ ಖ್ಯಾತ ಲಾಂಗ್ ಜಂಪ್ ಕ್ರೀಡಾಪಟು ಅಂಜಿ ಬಾಬಿ ಜಾರ್ಜ್ (Anju Bobby George) 2003 ಪ್ಯಾರಿಸ್ ಗೇಮ್ಸ್ನಲ್ಲಿ ಫೈನಲ್ ತಲಪಿದ್ದು ಬಿಟ್ಟರೆ ಇಲ್ಲಿ ತನಕ ಯಾರೂ ಈ ಸಾಧನೆ ಮಾಡಿರಲಿಲ್ಲ. ಈಗ ಪುರುಷರ ವಿಭಾಗದಲ್ಲಿ ಮುರಳಿ ಈ ಸಾಧನೆ ಮಾಡಿದ್ದಾರೆ.

ವಿಶ್ವಚಾಂಪಿಯನ್ ಶಿಪ್ನ ಕ್ವಾಲಿಫಿಕೇಶನ್ ರೌಂಡನಲ್ಲಿ ಜಪಾನ್ನ ಯೂಕಿ 8.18 ಮೀಟರ್ ಜಂಪ್ ದಾಖಲಿಸಿದರೆ, ಅಮೆರಿಕದ ಮಾರ್ಕಿಸ್ ಡೆಂಡಿ 8.16 ಮೀಟರ್ ಹಾರಿ ಆಟೋಮ್ಯಾಟಿಕ್ ಕ್ವಾಲಿಫಿಕೇಶನ್ ರೌಂಡ್ ಪಾಸಾಗಿ ಫೈನಲ್ಗೆ ಅರ್ಹತೆ ಪಡೆದರು.
ಅರ್ಹತಾ ಸುತ್ತಿನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಶ್ರೀಶಂಕರ್ 8 ಮೀಟರ್ ಜಂಪ್ ಮಾಡಲು ಸಾಧ್ಯವಾಯಿತು. ಆದರೆ ಈ ಗುಂಪಿನ ಬೆಸ್ಟ್ 6 ಜಂಪ್ಗಳ ಪೈಕಿ ಇದು ಕೂಡ ಒಂದಾಗಿತ್ತು. ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 3000 ಮೀಟರ್ ಸ್ಟೀಪಲ್ ಚೇಸ್ನಲ್ಲಿ ಅವಿವಾಶ್ ಸಬ್ಲೆ ಕೂಡ ಪೈನಲ್ ಪ್ರವೇಶಿಸುವ ನಿರೀಕ್ಷೆ ಇದೆ.