ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಯಾರು ಬೆಸ್ಟ್ ಬ್ಯಾಟ್ಸ್ಮನ್. ಜೋ ರೂಟ್ (Joe Root)ಅಂತ ಕೆಲವರು ಹೇಳಿದರೆ, ಇನ್ನು ಕೆಲವರಿಗೆ ಸ್ಟೀವನ್ ಸ್ಮಿತ್ (Steven Smith) ಬೆಸ್ಟ್. ಮತ್ತೆ ಕೆಲವರಿಗೆ ಕೇನ್ ವಿಲಿಯಮ್ಸನ್ (Kane Williamson) ಕಂಡರೆ, ಹಲವರಿ ವಿರಾಟ್ ಕೊಹ್ಲಿಯೇ (Virat Kohli) ಫೆವರೀಟ್. ಆದರೆ 2021ರಿಂದ ಶತಕದ ಲೆಕ್ಕ ಕೇಳಿದರೆ ಜೋ ರೂಟ್ ಈ Fabulous Four ಪಟ್ಟಿಯಲ್ಲಿ ಉಳಿದೆಲ್ಲರಿಗಿಂತ ಮುಂದೆ ನಿಲ್ಲುತ್ತಾರೆ.
2021ರಿಂದ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ರೂಟ್ 28 ಶತಕ ಸಿಡಿಸಿದ್ದರೂ, ಕಳೆದ ಒಂದೂವರೆ ವರ್ಷಗಳಲ್ಲಿ ಸಿಡಿಸಿದ ಶತಕಗಳ ಸಂಖ್ಯೆ 12. ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿಯ ಟೆಸ್ಟ್ ಕೆರಿಯರ್ನಲ್ಲಿ ಶತಕಗಳ ಸಂಖ್ಯೆ ಹೆಚ್ಚು ಕಡಿಮೆ ಒಂದೇ ತರಹ ದೆ. ಆದರೆ 2021ರಿಂದ ಈಚೆಗೆ ಈ ಮೂವರು ಒಟ್ಟು ಸೇರಿ ಸಿಡಿಸಿದ ಶತಕಗಳ ಸಂಖ್ಯೆ ಕೇವಲ ಮೂರು. ಅಂದರೆ ಜೋ ರೂಟ್ ಈ ಮೂವರು ಸಿಡಿಸಿದ ಒಟ್ಟು ಶತಕಕ್ಕಿಂತ 4 ಪಟ್ಟು ಹೆಚ್ಚು ಶತಕ ದಾಖಲಿಸಿದ್ದಾರೆ.

ಇನ್ನು ಸ್ಟೀವನ್ ಸ್ಮಿತ್ ತಾಂತ್ರಿಕವಾಗಿ ಪಕ್ಕಾ ಇಲ್ಲ ಅನ್ನುವವರಿಗೆ ಸ್ಮಿತ್ ಟೆಸ್ಟ್ ಶತಕಗಳ ಮೇಲೆ ಶತಕ ಸಿಡಿಸಿ ಕೌಂಟರ್ ಕೊಟ್ಟಿದ್ದರು. ಡಾನ್ ಬ್ರಾಡ್ಮನ್ ಬಳಿಕ ಹೆಚ್ಚು ಸರಾಸರಿ ಹೊಂದಿದ್ದ ಆಟಗಾರ ಅನ್ನುವ ಗಳಿಕೆ ಒಂದು ಕಾಲದಲ್ಲಿ ಸ್ಮಿತ್ ಬಳಿಯಿತ್ತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಸ್ಮಿತ್ ಸಿಡಿಸಿದ್ದು ಕೇವಲ 2 ಟೆಸ್ಟ್ ಶತಕ ಮಾತ್ರ.
ಇನ್ನು ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್ನ ಬೆಸ್ಟ್ ಬ್ಯಾಟ್ಸ್ಮನ್. ತಾಂತ್ರಿಕವಾಗಿ ಪಕ್ವತೆ ಇದೆ. ಟೆಕ್ಸ್ಟ್ ಬುಕ್ ಸ್ಟೈಲ್ ಇದೆ. ಟೆಂಪರಮೆಂಟ್, ಕ್ವಾಲಿಟಿ ಎಲ್ಲವೂ ಇದೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ವಿಲಿಯಮ್ಸನ್ ಬ್ಯಾಟ್ ಮಾತನಾಡುತ್ತಿಲ್ಲ. ಕಾರಣ ಏನೂ ಅಂತನೂ ಗೊತ್ತಿಲ್ಲ. ಆದರೆ ಈ ಅವಧಿಯಲ್ಲಿ ವಿಲಿಯಮ್ಸನ್ ಸಿಡಿಸಿದ್ದು ಕೇವಲ 1 ಶತಕ ಮಾತ್ರ.
ರೂಟ್, ವಿರಾಟ್, ವಿಲಿಯಮ್ಸನ್, ಸ್ಮಿತ್ ಎಲ್ಲರೂ ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಎಲ್ಲರೂ ರನ್ಗಳಿಸಿದ್ದರು. ಆದರೆ ವೃತ್ತಿಯ ಜೀವನದ ಏರು ಪೇರಿನ ಸಮಯದಲ್ಲಿ ರೂಟ್ ಮುನ್ನುಗ್ಗುತ್ತಿದ್ದಾರೆ. ಉಳಿದವರು ಹಿಂದೆ ಬಿದ್ದಿದ್ದಾರೆ.
Fab Four – ಜೋ ರೂಟ್ 12, ಸ್ಮಿತ್ 2, ವಿಲಿಮ್ಸನ್ 1, ವಿರಾಟ್ 0..!