women’s hockey World Cup- ಭಾರತ ತಂಡದಲ್ಲಿ ರಾಣಿ ರಾಮ್‍ಪಾಲ್ ಗೆ ಸ್ಥಾನ ಇಲ್ಲ.. ಸವಿತಾ ನಾಯಕಿ..!

ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಮ್‍ಪಾಲ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ರಾಣಿ ರಾಮ್ ಪಾಲ್ ಅವರು ಭಾರತ ಮಹಿಳಾ ಹಾಕಿ ತಂಡದ ಅಮೋಘ ಆಟಗಾರ್ತಿಯಾಗಿದ್ದರು. ಆದ್ರೆ ಗಾಯ ಮತ್ತು ಫಿಟ್ ನೆಸ್ ಸಮಸ್ಯೆಯಿಂದ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಗೋಲ್ ಕೀಪರ್ ಸವಿತಾ ಪೂನಿಯಾ ಅವರು ಮುನ್ನಡೆಸಲಿದ್ದಾರೆ.
18 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡದಲ್ಲಿ ಅಚ್ಚರಿಯ ಆಯ್ಕೆಗಳು ಏನು ಆಗಿಲ್ಲ. ಇತ್ತೀಚೆಗೆ ಎಫ್ ಐಎಚ್ ಪ್ರೋ ಲೀಗ್ ನಲ್ಲಿ ಆಡಿದ್ದ ಬಹುತೇಕ ಆಟಗಾರ್ತಿಯರು ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಾಣಿ ರಾಮ್ ಪಾಲ್ ಅವರ ಸಾರಥ್ಯದಲ್ಲಿ ಭಾರತ ಮಹಿಳಾ ತಂಡ ಅದ್ಭುತ ಪ್ರದರ್ಶನವನ್ನು ನೀಡಿತ್ತು. 2020ರ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಬಳಿಕ ಎಫ್ ಐಎಚ್ ಪ್ರೋ ಲೀಗ್ ನಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ ವಿರುದ್ಧವೂ ರಾಣಿ ನಾಯಕತ್ವದಲ್ಲಿ ಅಮೋಘ ಆಟವನ್ನಾಡಿತ್ತು. ಆದ್ರೆ ಸ್ನಾಯು ಸೆಳೆತದಿಂದಾಗಿ ರಾಣಿ ರಾಮ್ ಪಾಲ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಡಿರಲಿಲ್ಲ. women’s hockey World Cup- Unfit Rani left out of women’s hockey WC squad
ಜುಲೈ 1ರಿಂದ 17ರವರೆಗೆ ಎಫ್ ಐಎಚ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ ನಡೆಯಲಿದೆ. ನೆದರ್ಲೆಂಡ್ ಮತ್ತು ಸ್ಪೇನ್ ದೇಶಗಳು ಈ ಟೂರ್ನಿಯ ಆತಿಥ್ಯ ವಹಿಸಲಿವೆ.
ಗೋಲ್ ಕೀಪರ್ಸ್ – ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಖಾರಿಬಾಮ್
ಡಿಫೆಂಡರ್ಸ್ – ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ,
ಮಿಡ್ ಫೀಲ್ಡರ್ಸ್ – ನಿಶಾ, ಸುಶಿಲಾ ಚಾನು, ಮೋನಿಕಾ, ನೆಹಾ, ಜ್ಯೋತಿ, ನವ್ ಜೋತ್ ಕೌರ್, ಸಲೀಮಾ ಟೆಟೆ
ಫಾರ್ವಡ್ರ್ಸ್ – ವಂದನಾ ಕಟಾರಿಯಾ, ಲಾಲ್ರೆಮ್ ಸಿಯಾಮಿ, ನವನೀತ್ ಕೌರ್, ಶರ್ಮಿಲಾ ದೇವಿ,
ಹೆಚ್ಚುವರಿ ಆಟಗಾರ್ತಿಯರು – ಅಕ್ಷತಾ ಅಬಾಸೊ, ಧೇಕಾಲೆ, ಸಂಗೀತ ಕುಮಾರಿ.