Women’s FIH Pro League hockey ಚೀನಾ ವಿರುದ್ದ ಸತತ ಎರಡನೇ ಜಯ ಸಾಧಿಸಿ ಭಾರತ ಮಹಿಳಾ ತಂಡ
ಎಫ್ ಐಎಚ್ ಪ್ರೋ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಚೀನಾ ವಿರುದ್ಧ ಸತತ ಎರಡನೇ ಜಯ ಸಾಧಿಸಿದೆ.
ಮಸ್ಕತ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1ರಿಂದ ಚೀನಾ ತಂಡವನ್ನು ಪರಾಭವಗೊಳಿಸಿತ್ತು. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 7-0 ಗೋಲುಗಳಿಂದ ಮಣಿಸಿತ್ತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಭಾರತದ ಮೋನಿಕಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ್ರು. ಚೀನಾ ವಿರುದ್ಧದ ಗೆಲುವು ತುಂಬಾನೇ ಖುಷಿ ನೀಡಿದೆ. ತಂಡದ ಹೊಂದಾಣಿಕೆಯಿಂದ ಆಡಿದೆ, ಹೀಗಾಗಿ ಒಗ್ಗಟ್ಟಿನ ಪ್ರದರ್ಶನ ನೀಡಲು ಸಾಧ್ಯವಾಯ್ತು. ಕಳೆದ ಒಲಿಂಪಿಕ್ಸ್ ನಲ್ಲಿ ಆಡಿದ್ದೇವು. ಇದೀಗ ನಮ್ಮ ನೈಜ ಆಟವನ್ನಾಡಿ ಗೆಲುವು ದಾಖಲಿಸಲು ಸಾಧ್ಯವಾಯ್ತು ಎಂದು ಮೋನಿಕಾ ಅವರು ಹೇಳಿದ್ರು. \