Womens Asia Cup – ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡ ಭಾರತ ಮಹಿಳಾ ತಂಡ
ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಕಂಚಿಗೆ ಸಮಾಧಾನಪಟ್ಟುಕೊಂಡಿದೆ.
ಮಸ್ಕತ್ ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-0 ಗೋಲುಗಳಿಂದ ಚೀನಾ ತಂಡವನ್ನು ಪರಾಭವಗೊಳಿಸಿತು.
ಭಾರತ ತಂಡದ ಪರ ಶರ್ಮಿಲಾ ದೇವಿ ಅವರು 13ನೇ ನಿಮಿಷದಲ್ಲಿ ಮತ್ತು ಗುರ್ಜಿತ್ ಕೌರ್ ಅವರು 19ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡ ಸೆಮಿಫೈನಲ್ ನಲ್ಲಿ ಕೊರಿಯಾ ತಂಡದ ವಿರುದ್ದ ಸೋಲು ಅನುಭವಿಸಿತ್ತು. Womens Asia Cup – India sign off with consolation bronze
ಇನ್ನು ಫೈನಲ್ ನಲ್ಲಿ ಜಪಾನ್ ತಂಡ 4-2ರಿಂದ ಕೊರಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಕೋವಿಡ್ ನಿಂದಾಗಿ ಭಾರತ ಮಹಿಳಾ ತಂಡಕ್ಕೆ ಅಭ್ಯಾಸದ ಕೊರತೆ ಕೂಡ ಎದುರಾಗಿತ್ತು. ಆದ್ರೂ ಟೂರ್ನಿಯಲ್ಲಿ ಗಮನ ಸೆಳೆಯುವಂತಹ ಪ್ರದರ್ಶನವನ್ನು ನೀಡಿದೆ.