ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ – ಶುಭಾಂಕರ್ ಗೆ ಆಘಾತ ನೀಡಿದ ಕಿರಣ್ ಜಾರ್ಜ್
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿರಣ್ ಜಾರ್ಜ್ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕಟಕ್ ನಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿರಣ್ ಜಾರ್ಜ್ ಅವರು ಮೂರನೇ ಶ್ರೇಯಾಂಕಿತ ಶುಭಾಂಕರ್ ಡೇಯ್ ಅವರನ್ನು ಅಚ್ಚರಿಗೊಳಿಸಿದ್ರು.
Odisha Open badminton 3rd seed Subhankar stunned in quarters
ಟೂರ್ನಿಯಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದ ಕಿರಣ್ ಜಾರ್ಜ್ 21-16, 10-21, 21-19ರಿಂದ ಶುಭಾಂಕರ್ ಡೇಯ್ ಅವರನ್ನು ಮಣಿಸಿದ್ರು.
ಸೆಮಿಫೈನಲ್ ನಲ್ಲಿ ಕಿರಣ್ ಜಾರ್ಜ್ ಅವರು ಅನ್ಸಾಲ್ ಯಾದವ್ ಅವರನ್ನು ಎದುರಿಸಲಿದ್ದಾರೆ. ಅನ್ಸಾಲ್ ಯಾದವ್ ಅವರು ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ತರುಣ್ ಮನ್ನೆಪಲ್ಲಿ ಅವರನ್ನು 21-15, 23-21 ನೇರ ಸೆಟ್‍ಗಳಿಂದ ಪರಾಭವಗೊಳಿಸಿದ್ರು.
ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಪ್ರಿಯಾಂಶು ರಾಜವತ್ ಮತ್ತು ಕುಶಾಲ್ ಧರ್ಮಮೆರ್ ಅವರು ಫೈಟ್ ನಡೆಸಲಿದ್ದಾರೆ.
ಪ್ರಿಯಾಂಶು ರಾಜವತ್ ಅವರು 13-21, 21-14, 21-8ರಿಂದ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿದ್ರು. ಹಾಗೇ ಕುಶಾಲ್ ಧರ್ಮಮೆರ್ 14-21, 21-18, 21-18ರಿಂದ ಅಭ್ಯಾಂಶು ಸಿಂಗ್ ಅವರನ್ನು ಪರಾಭವಗೊಳಿಸಿದ್ರು.
ಇನ್ನು ಪುರುಷರ ಡಬಲ್ಸ್ ನಲ್ಲಿ ವಸಂತ್ ಕುಮಾರ್ ಮತ್ತು ಆಶೀತ್ ಸೂರ್ಯ ಅವರು ಸೆಮಿಫೈನಲ್ ನಲ್ಲಿ ಶಂಕರ್ ಪ್ರಸಾದ್ ಉದಯ್ ಕುಮಾರ್ ಮತ್ತು ರವಿಕೃಷ್ಣ ಅವರನ್ನು ಎದುರಿಸಲಿದ್ದಾರೆ.
ಹಾಗೇ ಇನ್ನೊಂದು ಸೆಮಿಫೈನಲ್ ನಲ್ಲಿ ಶ್ರೀಲಂಕಾದ ಸಚಿನ್ ಡಯಾಸ್ ಮತ್ತು ಬುವಾನೆಕಾ ಗುಣೆತಿಲಕ ಅವರು ಮಲೇಶಿಯಾದ ನೂರ್ ಮಹಮ್ಮದ್ ಅಝ್ರಿಯನ್ ಅಯುಬ್ ಮತ್ತು ಲಿಮ್ ಖಿಮ್ ವಾಹ್ ನಡುವೆ ಪೈಪೋಟಿ ನಡೆಯಲಿದೆ.